SHOCKING ಸತ್ತವನ ಚಿತಾಭಸ್ಮ ತೆಗೆದುಕೊಳ್ಳಲು ಹೋದಾಗ ಕತ್ತರಿ ಪತ್ತೆ; ಆಪರೇಶನ್ ಮಾಡಿದ ವೈದ್ಯ ಹೊಟ್ಟೆಯೊಳಗೆ ಕತ್ತರಿ ಬಿಟ್ಟಿದ್ದು ಸಾವಿಗೆ ಕಾರಣ ಎಂದು ಆರೋಪಿಸಿದ ಕುಟುಂಬ

SHOCKING ಸತ್ತವನ ಚಿತಾಭಸ್ಮ ತೆಗೆದುಕೊಳ್ಳಲು ಹೋದಾಗ ಕತ್ತರಿ ಪತ್ತೆ; ಆಪರೇಶನ್ ಮಾಡಿದ ವೈದ್ಯ ಹೊಟ್ಟೆಯೊಳಗೆ ಕತ್ತರಿ ಬಿಟ್ಟಿದ್ದು ಸಾವಿಗೆ ಕಾರಣ ಎಂದು ಆರೋಪಿಸಿದ ಕುಟುಂಬ

ರಾಜಸ್ಥಾನ;ಆಪರೇಷನ್‌ ಮಾಡಿದ ವೈದ್ಯ ರೋಗಿಯ ದೇಹದೊಳಗೆ ಕತ್ತರಿ ಇಟ್ಟು ಸ್ಟಿಚ್ ಹಾಕಿದ ಕಾರಣ ಆಪರೇಷನ್‌ ಮಾಡಿಸಿಕೊಂಡ 12 ದಿನದ ಬಳಿಕ ರೋಗಿ ಮೃತಪಟ್ಟ ಘಟನೆ ಜೈಪುರದಿಂದ ವರದಿಯಾಗಿದೆ.

ಜೈಪುರದ ಆಸ್ಪತ್ರೆಯೊಂದರಲ್ಲಿ ಆಪರೇಷನ್‌ ಮಾಡಿಸಿಕೊಂಡ ಉಪೇಂದ್ರ ಶರ್ಮಾ (74) ಎಂಬವರು ಮೃತಪಟ್ಟಿದ್ದಾರೆ.

ಉಪೇಂದ್ರ ಶರ್ಮಾ ಅವರ ದೇಹದಲ್ಲಿ ವೈದ್ಯರು ಕತ್ತರಿಯನ್ನು ಬಿಟ್ಟ ಕಾರಣ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಆಸ್ಪತ್ರೆಯ ಆಡಳಿತ ಮಂಡಳಿಯು ಉಪೇಂದ್ರ ಶರ್ಮಾ ಕುಟುಂಬಸ್ಥರ ಆರೋಪವನ್ನು ನಿರಾಕರಿಸಿದೆ.

ಇದೀಗ ಕುಟುಂಬಸ್ಥರು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿದ್ದಾರೆ.

ಮಾನ್‌ಸರೋವರ ನಿವಾಸಿಯಾದ ಉಪೇಂದ್ರ ಶರ್ಮಾ ಅವರು ಮೇ 29ರಂದು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಮೇ 30ರಂದು ಅವರಿಗೆ ಆಪರೇಷನ್‌ ಮಾಡಲಾಗಿದೆ.ಮೇ 31ರಂದು ಅವರನ್ನು ಆಸ್ಪತ್ರೆಯಿಂದ ಡಿಸ್‌ ಚಾರ್ಜ್‌ ಮಾಡಲಾಗಿದೆ.

ಆಪರೇಷನ್‌ ಮಾಡಿಸಿಕೊಂಡು ಮನೆಗೆ ಬಂದ ಬಳಿಕ ಅವರ ಆರೋಗ್ಯ ಮತ್ತೆ ಗಂಭೀರವಾಗಿದೆ. ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಗಾಬರಿ ಬೇಡ ಗುಣವಾಗುತ್ತದೆ ಎಂದು ವಾಪಸ್‌ ಕಳುಹಿಸಿದರು.

ಆದರೆ ಜೂನ್‌ 12ರಂದು ಉಪೇಂದ್ರ ಶರ್ಮಾ ಅವರು ಮೃತಪಟ್ಟರು. ಅಂತ್ಯಸಂಸ್ಕಾರದ ಬಳಿಕ ಅವರ ದೇಹದ ಚಿತಾಭಸ್ಮ ತೆಗೆದುಕೊಳ್ಳಲು ಹೋದಾಗ ಕತ್ತರಿ ಪತ್ತೆಯಾಗಿದೆ. ವೈದ್ಯರು ಆಪರೇಷನ್‌ ಬಳಿಕ ಕತ್ತರಿ ಹೊರತೆಗೆದಿಲ್ಲ ಎಂದು ಈ ವೇಳೆ ಕುಟುಂಬ ಆರೋಪಿಸಿದೆ.

ಟಾಪ್ ನ್ಯೂಸ್