ಸರ್ಕಲ್ ಇನ್ಸ್ ಪೆಕ್ಟರ್ ಸೇರಿ 6 ಜನ ಪೊಲೀಸರಿಗೆ 1 ದಿನದ ಜೈಲು ಶಿಕ್ಷೆ; ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾದ ವಿಧಾನಸಭೆ, ಏನಿದು ಎರಡು ದಶಕಗಳ ಹಿಂದಿನ ಪ್ರಕರಣ?

ಎರಡು ದಶಕಗಳ ಹಿಂದಿನ ಹಕ್ಕುಚ್ಯುತಿ ಉಲ್ಲಂಘನೆ ಪ್ರಕರಣದಲ್ಲಿ ಆರು ಜನರು ಪೊಲೀಸರಿಗೆ ಒಂದು ದಿನದ ಜೈಲು ಶಿಕ್ಷೆಯನ್ನು ಉತ್ತರಪ್ರದೇಶದ ವಿಧಾನಸಭೆ ವಿಧಿಸಿದೆ.

ವಿಧಾನಸೌಧದ ಕೊಠಡಿಯಲ್ಲಿ ಮಧ್ಯರಾತ್ರಿಯವರೆಗೂ ಶಿಕ್ಷೆ ಅನುಭವಿಸುವಂತೆ ಸ್ಪೀಕರ್ ತೀರ್ಪು ನೀಡಿದ್ದಾರೆ.

ಸುಮಾರು ಎರಡು ದಶಕಗಳಷ್ಟು ಹಳೆಯದಾದ ಪ್ರಕರಣದಲ್ಲಿ ಆಗಿನ ಬಿಜೆಪಿ ಶಾಸಕ ಸಲೀಲ್ ವಿಷ್ಣೋಯ್ ವಿಶೇಷ ಹಕ್ಕು ಉಲ್ಲಂಘನೆ ನೋಟಿಸ್‌ ನೀಡಿದ್ದರು. 2004ರ ಸೆಪ್ಟೆಂಬರ್ 15ರಂದು ಕಾನ್ಪುರದಲ್ಲಿ ವಿದ್ಯುತ್ ಕಡಿತದ ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ದೂರು ನೀಡಲು ವಿಷ್ಣೋಯಿ ನೇತೃತ್ವದ ನಿಯೋಗ ತೆರಳಿತ್ತು. ಆಗ ಪೊಲೀಸ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದರು. ಈ ಸಂಬಂಧ ಹಕ್ಕುಚ್ಯುತಿ ಉಲ್ಲಂಘನೆ ನೋಟಿಸ್​ ಕೊಟ್ಟಿದ್ದರು.

ಈ ಪ್ರಕರಣದ ಕುರಿತ ವಿಚಾರಣೆಗಾಗಿ ಸದನದ ವಿಶೇಷಾಧಿಕಾರ ಸಮಿತಿಯನ್ನು ನೇಮಿಸಲಾಗಿತ್ತು.ಸಮಿತಿಯ ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಅವರು, ಆರು ಜನ ಪೊಲೀಸರಿಗೆ ಒಂದು ದಿನದ ಜೈಲುವಾಸ ನಿರ್ಣಯವನ್ನು ಮಂಡಿಸಿದರು. ನಂತರ ಸ್ಪೀಕರ್ ಸತೀಶ್ ಮಹಾನಾ ತೀರ್ಪು ಪ್ರಕಟಿಸಿದರು. ಈ ಶಿಕ್ಷೆಯನ್ನು ಪೊಲೀಸರು ಮಧ್ಯರಾತ್ರಿಯವರೆಗೂ ವಿಧಾನಸೌಧದ ಒಂದು ಕೊಠಡಿ ಒಳಗೆ ಅನುಭವಿಸಬೇಕು.

ಕಾನ್ಪುರ್ ನಗರದಲ್ಲಿನ ಬಾಬುಪುರದ ಸರ್ಕಲ್ ಆಫೀಸರ್ ಆಗಿದ್ದ ಅಬ್ದುಲ್ಸಮದ್, ಕಿದ್ವಾಯಿ ನಗರದ ಎಸ್​ಹೆಚ್​ಒ ಶ್ರೀಕಾಂತ್ ಶುಕ್ಲಾ, ಸಬ್​ ಇನ್ಸ್​​ಪೆಕ್ಟರ್​ ತ್ರಿಲೋಕಿ ಸಿಂಗ್ ಹಾಗೂ ಕಾನ್ಸ್​ಟೇಬಲ್‌ಗಳಾದ ಚೋಟೆ ಸಿಂಗ್, ವಿನೋದ್ ಮಿಶ್ರಾ ಮತ್ತು ಮೆಹರ್ಬನ್ ಸಿಂಗ್ ಶಿಕ್ಷೆಗೆ ಒಳಗಾಗಿದ್ದಾರೆ.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

Developed by eAppsi.com