“ನಲ್ಲಿ” ಕಳ್ಳನ ಪತ್ತೆಗೆ ಟಾಯ್ಲೆಟ್ ಗೆ ಸಿಸಿಟಿವಿ ಅಳವಡಿಸಿದ ಕಾಲೇಜು ಆಡಳಿತ ಮಂಡಳಿ; ವಿದ್ಯಾರ್ಥಿಗಳಿಂದ ಪ್ರತಿ‌ಭಟನೆ

“ನಲ್ಲಿ” ಕಳ್ಳನ ಪತ್ತೆಗೆ ಟಾಯ್ಲೆಟ್ ಗೆ ಸಿಸಿಟಿವಿ ಅಳವಡಿಸಿದ ಕಾಲೇಜು ಆಡಳಿತ ಮಂಡಳಿ; ವಿದ್ಯಾರ್ಥಿಗಳಿಂದ ಪ್ರತಿ‌ಭಟನೆ

ಉತ್ತರಪ್ರದೇಶ;ಕಾಲೇಜೊಂದರಲ್ಲಿ ನಲ್ಲಿ ಕಳ್ಳರನ್ನು ಹಿಡಿಯಲು ಟಾಯ್ಲೆಟ್ ನ ಒಳಗಡೆ ಸಿಸಿ ಕ್ಯಾಮೆರಾವನ್ನು ಅಳವಡಿಕೆ ಮಾಡಿ ಕಾಲೇಜು ಆಡಳಿತ ಮಂಡಳಿ ಯಡವಟ್ಟು ಮಾಡಿದ್ದು, ಇದೀಗ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.

ಉತ್ತರ ಪ್ರದೇಶದ ಅಜಂಗಢದಲ್ಲಿರುವ ಡಿಎವಿ ಪಿಜಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

ಕಳ್ಳನನ್ನು ಹಿಡಿಯಲು ಕಾಲೇಜು ಅಧಿಕಾರಿಗಳು ಶೌಚಾಲಯದಲ್ಲೇ ಸಿಸಿಟಿವಿಗಳನ್ನು ಹಾಕಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಗೌಪ್ಯತೆಯ ಉಲ್ಲಂಘನೆ, ನಮ್ಮ ಗೌಪ್ಯತೆಯ ಮೇಲೆ ಆಕ್ರಮಣ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟ‌ನೆ ಮಾಡಿದ್ದಾರೆ.
ಮ್ಯಾನೇಜ್‌ಮೆಂಟ್‌ ಗೆ ಬುದ್ಧಿ ಇಲ್ಲವೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕ್ಷಮೆ ಯಾಚಿಸಿದ ಕಾಲೇಜು ಆಡಳಿತ ಮಂಡಳಿ,ಕ್ಯಾಂಪಸ್‌ನಿಂದ ನಿಯಮಿತವಾಗಿ ನೀರಿನ ನಲ್ಲಿಗಳನ್ನು ಕಳ್ಳತನ ಮಾಡಲಾಗುತ್ತಿದೆ. ಈ ಹಿನ್ನೆಲೆ, ಇದನ್ನು ತಡೆಯಲು ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಆದರೆ, ಒಂದು ಕ್ಯಾಮೆರಾ ತಪ್ಪಾಗಿ ಟಾಯ್ಲೆಟ್‌ನೊಳಗೆ ಹಾಕಲಾಗಿದೆ. ಅದನ್ನು ತೆಗೆದು ಬೇರೆ ಸ್ಥಳದಲ್ಲಿ ಸ್ಥಾಪಿಸಲು ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್