ನನ್ನ ಸ್ಕೂಟರ್ ನಲ್ಲಿ ಪೊಲೀಸರೇ ಪಿಸ್ತೂಲ್ ಇಟ್ಟು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ- ಆರೋಪಿಸಿದ ಯುವಕ

ನನ್ನ ಸ್ಕೂಟರ್ ನಲ್ಲಿ ಪೊಲೀಸರೇ ಪಿಸ್ತೂಲ್ ಇಟ್ಟು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ- ಆರೋಪಿಸಿದ ಯುವಕ

ಉತ್ತರಪ್ರದೇಶ; ಮೀರತ್‌ನಲ್ಲಿ ಪ್ಲಂಬರ್ ಒಬ್ಬರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟರ್‌ನಲ್ಲಿ ಪೊಲೀಸರು ಕಂಟ್ರಿಮೇಡ್ ಪಿಸ್ತೂಲ್‌ನ್ನು ಹಾಕಿ ಬಳಿಕ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಫಿರೋಜ್‌ ಎಂಬವರು ಈ ಕುರಿತು ಆರೋಪವನ್ನು ಮಾಡಿದ್ದು, ಬುಧವಾರ ರಾತ್ರಿ ಮೂವರು ಪೊಲೀಸರು ಕಾರಿನಲ್ಲಿ ಮನೆಗೆ ಬಂದು ನನ್ನ ಹೆಸರನ್ನು ಕರೆದರು. ಮನೆಯಲ್ಲಿ ನಾನು ಇರದ ಕಾರಣ ತಾಯಿ ಹೊರಗೆ ಬಂದರು. ಪೊಲೀಸರು ನನಗೆ ವಿಚಾರಿಸಿ ಸ್ಕೂಟರ್‌ನ ಕೀಗಳನ್ನು ಕೇಳಿದ್ದಾರೆ. ಬಳಿಕ ಮೂವರು ಪೊಲೀಸರು ತನ್ನ ಸ್ಕೂಟರ್‌ನ ಸೀಟನ್ನು ಎತ್ತಿ ಒಳಗೆ ಪಿಸ್ತೂಲ್ ಹಾಕಿದ್ದಾರೆ ಎಂದು ಫಿರೋಜ್ ಆರೋಪಿಸಿದ್ದಾರೆ. ಬಳಿಕ ಪೊಲೀಸರು ಸ್ಕೂಟರ್‌ನ ಒಳಗೆ ಪಿಸ್ತೂಲ್ ಇರುವ ವಿಡಿಯೋ ಮಾಡಿ ಸ್ಕೂಟರ್‌ನೊಂದಿಗೆ ತೆರಳಿದ್ದಾರೆ ಎಂದು ಫಿರೋಜ್‌ ಆರೋಪಿಸಿದ್ದಾರೆ.

ಬಳಿಕ ಪೊಲೀಸರು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಗಿ ಆತ ಹೇಳಿಕೊಂಡಿದ್ದು, ಚರ್ಚೆಯ ಬಳಿಕ 50,00 ಲಂಚ ನೀಡಿ ತನ್ನ ಸ್ಕೂಟರ್ ವಾಪಸ್ ಪಡೆದಿರುವುದಾಗಿ ಫಿರೋಜ್‌ ಹೇಳಿದ್ದಾರೆ.

ಆದರೆ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ರೋಹಿತ್ ಸಿಂಗ್ ಸಜ್ವಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ರಕರಣದ ಕುರಿತು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಪ್ಲಂಬರ್ ಆಗಿರುವ ಫಿರೋಜ್ ಮಾಡಿರುವ ಆರೋಪವನ್ನು ನಿರಾಕರಿಸಿದ್ದಾರೆ. ಪ್ರಕರಣದಲ್ಲಿ ಕರ್ತವ್ಯ ಲೋಪಕ್ಕೆ ಸಂಬಂಧಿಸಿ ಹೆಡ್ ಕಾನ್‌ಸ್ಟೆಬಲ್ ಚೌಬೆ ಸಿಂಗ್, ಕಾನ್ಸ್‌ಟೇಬಲ್ ಓಂವೀರ್ ಸಿಂಗ್ ಮತ್ತು ಅನಿಲ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಅಮಾನತುಗೊಂಡ ಪೊಲೀಸರು ಶಸ್ತ್ರಾಸ್ತ್ರ ರಿಕವರಿ ಬಗ್ಗೆ ತಮ್ಮ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ ಎಂದು ಅವರ ವಿರುದ್ಧ ಆರೋಪಿಸಲಾಗಿದೆ. ಆದರೆ ಅವರು ಫಿಸ್ತೂಲ್ ಇಟ್ಟಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಫಿರೋಜ್ ಅವರು ಮಾಡಿದ ಪೊಲೀಸರ ಮೇಲಿನ ಲಂಚದ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್‌ಎಸ್‌ಪಿ ಹೇಳಿದರು.

ಟಾಪ್ ನ್ಯೂಸ್