ಸೈಕಲ್ ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯ ದುಪ್ಪಟ್ಟ ಎಳೆದ ಪುಂಡರು; ನಿಯಂತ್ರಣ ತಪ್ಪಿ ಬೈಕ್ ನಡಿಗೆ ಬಿದ್ದು ವಿದ್ಯಾರ್ಥಿನಿ ಸಾವು

ಸೈಕಲ್ ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯ ದುಪ್ಪಟ್ಟ ಎಳೆದ ಪುಂಡರು; ನಿಯಂತ್ರಣ ತಪ್ಪಿ ಬೈಕ್ ನಡಿಗೆ ಬಿದ್ದು ವಿದ್ಯಾರ್ಥಿನಿ ಸಾವು

ಉತ್ತರಪ್ರದೇಶ; ಸೈಕಲ್​ನಲ್ಲಿ ಹೋಗುತ್ತಿದ್ದ ವೇಳೆ ಬಾಲಕಿಯ ದುಪ್ಪಟ್ಟವನ್ನು ಬೈಕ್ ನಲ್ಲಿ ತೆರಳುತ್ತಿದ್ದ ಯುವಕ ಎಳೆದಿದ್ದು,
ಇದರಿಂದ ಸಮತೋಲನ ಕಳೆದುಕೊಂಡ ವಿದ್ಯಾರ್ಥಿನಿ ರಸ್ತೆಗೆ ಬಿದ್ದಾಗ ವೇಗವಾಗಿ ಬಂದ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಂಬೇಡ್ಕರ್ ನಗರದ ಹಂಸವಾರ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಹಿ ಐದಿಲ್‌ಪುರದ ನಿವಾಸಿ 17 ವರ್ಷದ ನೈನ್ಸಿ ಪಟೇಲ್ ಮೃತ ದುರ್ದೈವು.

ಹೀರಾಪುರ ಬಜಾರ್‌ನ ರಾಮರಾಜಿ ಕಾಲೇಜಿನಲ್ಲಿ 12ನೇ ತರಗತಿ ಓದುತ್ತಿದ್ದ ಈಕೆ ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದಳು. ಈ ವೇಳೆ ಕೆಲ ಪುಂಡರು ಆಕೆಯನ್ನು ಬೈಕ್ ನಲ್ಲಿ ಹಿಂಬಾಲಿಸಿದ್ದಾರೆ. ಬಾಲಕಿಯನ್ನು ಚುಡಾಯಿಸಿ ಕಿರುಕುಳ ನೀಡಿದ್ದಾರೆ. ಹೀರಾಪುರ ಮಾರುಕಟ್ಟೆ ಬಳಿ ಬಂದಾಗ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ವೇಗವಾಗಿ ಬಂದು ಯುವತಿಯ ದುಪ್ಪಟ ಎಳೆದಿದ್ದಾರೆ.

ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಪುಂಡ ಬಾಲಕಿಯ ದುಪ್ಪಟವನ್ನು ಎಳೆದಿದ್ದಾನೆ. ಇದರಿಂದ ಸೈಕಲ್​ನಲ್ಲಿದ್ದ ಬಾಲಕಿ ಸಮತೋಲನ ತಪ್ಪಿ ರಸ್ತೆಗೆ ಬಿದ್ದಿದ್ದಾಳೆ. ಈ ವೇಳೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಘಟನೆಗೆ ಸಂಬಂಧಿಸಿ ಶಹಬಾಜ್, ಅರ್ಬಾಜ್ ಮತ್ತು ಫೈಜಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ‌.

ಟಾಪ್ ನ್ಯೂಸ್