ಸಮಾಜವಾದಿ ಪಕ್ಷದ ನಾಯಕನ ಮಗಳೊಂದಿಗೆ ಪರಾರಿಯಾದ 47 ವರ್ಷದ ವಿವಾಹಿತ ಬಿಜೆಪಿ ನಾಯಕ

ಉತ್ತರಪ್ರದೇಶ; 47 ವರ್ಷದ ವಿವಾಹಿತ ಬಿಜೆಪಿ ನಾಯಕ ಸಮಾಜವಾದಿ ಪಕ್ಷದ ನಾಯಕನ 26 ವರ್ಷದ ಮಗಳೊಂದಿಗೆ ಪರಾರಿಯಾದ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಬಿಜೆಪಿ ಮುಖಂಡ ಆಶಿಶ್ ಶುಕ್ಲಾ ಅವರು ಸಮಾಜವಾದಿ ಪಕ್ಷದ ಹಿರಿಯ ನಾಯಕರೊಬ್ಬರ ಪುತ್ರಿಯೊಂದಿಗೆ ಪರಾರಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾದ ನಂತರ ವಿವಾದ ಉಲ್ಬಣಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಆಶಿಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ ಮತ್ತು ಅವರನ್ನು ಎಲ್ಲಾ ಹುದ್ದೆಗಳಿಂದ ತೆಗೆದುಹಾಕಿದೆ.

ಟಾಪ್ ನ್ಯೂಸ್