ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೊತೆ ಸಂಪರ್ಕ ಆರೋಪ, 75ರ ಹರೆಯದ ವ್ಯಕ್ತಿ ಸೇರಿ 70 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೊತೆ ಸಂಪರ್ಕ ಆರೋಪ, 75ರ ಹರೆಯದ ವ್ಯಕ್ತಿ ಸೇರಿ 70 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಉತ್ತರಪ್ರದೇಶ;ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕೊತೆಗಿನ ಸಂಪರ್ಕದ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) 70 ಜನರನ್ನು ವಶಕ್ಕೆ ಪಡೆದುಕೊಂಡಿರುವ ಬಗ್ಗೆ ವರದಿಯಾಗಿದೆ.

ಇವರಲ್ಲಿ ಇಬ್ಬರ ಬಂಧನಕ್ಕೆ ಪೊಲೀಸರು ಮೊದಲೇ ಬಲೆ ಬೀಸಿದ್ದರು ಎನ್ನಲಾಗಿದೆ.ಬಂಧಿತರಲ್ಲಿ 75 ವರ್ಷದ ಲಕ್ನೋದ ವ್ಯಕ್ತಿ ಸೇರಿದ್ದಾರೆ ಎನ್ನಲಾಗಿದೆ.

ಭಯೋತ್ಪಾದನೆ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಾನೂನು ನೆರವು ನೀಡುವ ರಿಹಾಯ್ ಮಂಚ್ ಸಂಸ್ಥಾಪಕ, ಕಾರ್ಯಕರ್ತ-ವಕೀಲ ಮೊಹಮ್ಮದ್ ಶೋಯೆಬ್ ಅವರನ್ನು ಭಾನುವಾರ ಬೆಳಗ್ಗೆ ಲಕ್ನೋದ ಅಮಿನಾಬಾದ್ ಪ್ರದೇಶದಿಂದ “ವಿಚಾರಣೆಗಾಗಿ” ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆದರೆ, ಸಂಜೆಯ ವೇಳೆಗೆ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಈ ಹಿಂದೆ ಪಿಎಫ್‌ಐ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಒಟ್ಟು 211 ಮಂದಿಯನ್ನು ರಾಜ್ಯದಲ್ಲಿ ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶಂಕಿತರ ವಿರುದ್ಧ ಕ್ರಮ ಕೈಗೊಳ್ಳಲು ಶನಿವಾರ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಯುಪಿ-ಎಟಿಎಸ್ ವಾರಣಾಸಿಯಿಂದ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಇಬ್ಬರು ‘ವಾಂಟೆಡ್’ ಸದಸ್ಯರನ್ನು ಬಂಧಿಸಿದೆ ಮತ್ತು ರಾಜ್ಯವ್ಯಾಪಿ 20 ಜಿಲ್ಲೆಗಳಿಂದ 70 ಜನರನ್ನು ಕಸ್ಟಡಿಗೆ ತೆಗೆದುಕೊಂಡಿದೆ.

ಇಬ್ಬರು ಬಂಧಿತ ವ್ಯಕ್ತಿಗಳ ಸುಲಿವು ನೀಡಿದವರಿಗೆ 50,000 ಬಹುಮಾನವನ್ನು ಘೋಷಿಸಲಾಗಿತ್ತು ಮತ್ತು 2022 ರಲ್ಲಿ ವಾರಣಾಸಿಯ ಲೋಹ್ತಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಬೇಕಾಗಿದ್ದರು.

ಬಂಧಿತ ವ್ಯಕ್ತಿಗಳ ವಿರುದ್ಧ IPC ಸೆಕ್ಷನ್‌ಗಳು 153-A ಮತ್ತು 153-B ಮತ್ತು UAPA ಅಡಿಯಲ್ಲಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಪಿಎಫ್‌ಐ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದಾರೆ ಮತ್ತು ದೇಶದ ಕೇಡರ್ ಬೇಸ್ ಅನ್ನು ವಿಸ್ತರಿಸುತ್ತಿದ್ದಾರೆ ಎಂದು ಎಡಿಜಿ ಹೇಳಿರುವ ಬಗ್ಗೆ ವರದಿಯಾಗಿದೆ.

ಡಿಸೆಂಬರ್ 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ವರದಿಯಾದ ಹಿಂಸಾಚಾರದಲ್ಲಿ ಇಬ್ಬರೂ ಸಕ್ರಿಯರಾಗಿದ್ದರು ಎಂದು ಎಡಿಜಿ ಅರೋರಾ ಹೇಳಿದರು. ನಂತರ ಇಬ್ಬರು ತಪ್ಪಿಸಿಕೊಂಡರು ಮತ್ತು ತಮ್ಮ ಸ್ಥಳಗಳನ್ನು ಬದಲಾಯಿಸುವ ಮೂಲಕ ತಲೆಮರೆಸಿಕೊಂಡಿದ್ದರು ಎಂದು ಅರೋರಾ ಹೇಳಿದರು.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com