ಯುವಕನನ್ನು 12ಕ್ಕೂ ಅಧಿಕ ಬಾರಿ ಚೂರಿಯಿಂದ ಇರಿದು ಕೊಲೆ
ಲಕ್ನೋ(ಉತ್ತರ ಪ್ರದೇಶ): ಸ್ನೇಹಿತನ ಮನೆಗೆ ಪಾರ್ಟಿ ಮಾಡಲು ತೆರಳಿದ್ದ ವಿದ್ಯಾರ್ಥಿಯನ್ನು ಇಬ್ಬರು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ತಡರಾತ್ರಿ ಗೋಮತಿನಗರ ಪ್ರದೇಶದಲ್ಲಿ ನಡೆದಿದೆ.
ಕೇವಲ ಒಂದು ಸಾವಿರ ರೂಪಾಯಿ ವಿಚಾರದಲ್ಲಿ ನಡೆದ ಜಗಳದಲ್ಲಿ ಈ ಕೊಲೆ ನಡೆದಿದೆ. ಮೃತರನ್ನು 12ನೇ ತರಗತಿಯ ವಿದ್ಯಾರ್ಥಿ ಆಕಾಶ್ ಕಶ್ಯಪ್ (19 ವರ್ಷ) ಎಂದು ಗುರುತಿಸಲಾಗಿದೆ.
ಬಲಿಪಶುವನ್ನು ಚಾಕುವಿನಿಂದ 12 ಬಾರಿ ಇರಿದಿದ್ದಾರೆ. ಕೂಡಲೇ ಅವರನ್ನು ಸ್ನೇಹಿತರು ಲೋಹಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸ್ಥಿತಿ ಗಂಭೀರವಾದಾಗ ವೈದ್ಯರು ವಿದ್ಯಾರ್ಥಿಯನ್ನು ಕೆಜಿಎಂಯು ಟ್ರಾಮಾ ಸೆಂಟರ್‌ಗೆ ಕಳುಹಿಸಿದ್ದಾರೆ. ಅಲ್ಲಿ ಚಿಕಿತ್ಸೆ ವೇಳೆ ಆಕಾಶ್ ಮೃತಪಟ್ಟಿದ್ದಾರೆ.
ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಾಗಿತ್ತು. ಘಟನೆ ನಡೆಸಿದ ಆರೋಪಿಗಳಿಬ್ಬರೂ ತಲೆಮರೆಸಿಕೊಂಡಿದ್ದಾರೆ. ಹಂತಕರನ್ನು ಬಂಧಿಸಲು ಮೂರು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ.
ಪುರಿ-ಮಾರಾಟಗಾರ ಜಗದೀಶ್ ತನ್ನ ಕುಟುಂಬದೊಂದಿಗೆ ಗಾಜಿಪುರದ ಸಂಜಯ್ ಗಾಂಧಿಪುರಂ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಮಗ ಆಕಾಶ್ ಕಶ್ಯಪ್ ಸೇಂಟ್ ಪೀಟರ್ಸ್ ಶಾಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿಯಾಗಿದ್ದನು.
ಆಕಾಶ್ ಸ್ನೇಹಿತ ಜೈ ಎಂಬುವರು ಶನಿವಾರ ರಾತ್ರಿ 10 ಗಂಟೆಗೆ ತಮ್ಮ ಮನೆಗೆ ಬಂದಿದ್ದರು. ಅವರು ತಮ್ಮ ಮಗ ಆಕಾಶ್‌ನನ್ನು ಪಾರ್ಟಿಗೆ ಕರೆದುಕೊಂಡು ಹೋದರು. ಪಾರ್ಟಿಯಲ್ಲಿ ಆಕಾಶ್, ಅಭಯ್ ಮತ್ತು ಅವನೀಶ್ ಸೇರಿದಂತೆ ನಾಲ್ವರು ಭಾಗವಹಿಸಿದ್ದರು.ಈ ವೇಳೆ ಅಭಯ್ ಆಕಾಶ್ ಬಳಿ ಒಂದು ಸಾವಿರ ರೂಪಾಯಿ ಕೇಳಿದ್ದು, ಇದೇ ಹಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಪಾರ್ಟಿಯ ನಡುವೆಯೇ ಸ್ನೇಹಿತರು ವಿಷಯವನ್ನು ಸಮಾಧಾನಪಡಿಸಿದರು.
ಆದರೆ ಸ್ವಲ್ಪ ಸಮಯದ ನಂತರ ಅಭಯ್ ಇದ್ದಕ್ಕಿದ್ದಂತೆ ಚಾಕು ತೆಗೆದುಕೊಂಡು ಆಕಾಶ್ ಮೇಲೆ ಹಲವಾರು ಬಾರಿ ಹಲ್ಲೆ ನಡೆಸಿದ್ದಾನೆ. ಇದರಿಂದ ಆಕಾಶ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಸಾವನ್ನಪ್ಪಿದರು.
ಜೂನ್ 24 ರಂದು ಮಗನ ಹುಟ್ಟುಹಬ್ಬವಿತ್ತು ಮತ್ತು ಮಗನಿಗೆ ಬೈಕ್ ಖರೀದಿಸುವುದಾಗಿ ಭರವಸೆ ನೀಡಿದ್ದೆ ಎಂದು ಆಕಾಶ್ ತಂದೆ ಕಣ್ಣೀರು ಹಾಕುತ್ತಾ ಹೇಳಿದ್ದಾರೆ.