ಅನ್ಯ ಜಾತಿಯ ಜೋಡಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ತನಿಖೆ ವೇಳೆ ಸ್ಪೋಟಕ ಅಂಶ ಬಯಲು

ಅನ್ಯ ಜಾತಿಯ ಜೋಡಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ತನಿಖೆ ವೇಳೆ ಸ್ಪೋಟಕ ಅಂಶ ಬಯಲು

ಉನ್ನಾವೋ;ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ಜೋಡಿಯನ್ನು ಯುವತಿಯ ಕಡೆಯವರು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಉನ್ನಾವೋದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮರ್ಯಾದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಸೇರಿದಂತೆ ಏಳು ಮಂದಿಯ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಠಾಕೂರ್​ ಸಮುದಾಯಕ್ಕೆ ಸೇರಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯೂ ದಲಿತ ಸಮುದಾಯಕ್ಕೆ ಸೇರಿದ್ದ 19ವರ್ಷ ಪ್ರಾಯದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ತಮ್ಮ ಮಗಳು ಕೆಳಜಾತಿಯ ಯುವಕನನ್ನು ಮದುವೆಯಾಗಿರುವ ವಿಚಾರ ತಿಳಿದ ಪೋಷಕರು ಜೋಡಿಗೆ ಹುಡುಕಾಟ ನಡೆಸಿದ್ದಾರೆ. ‌‌

ಖಾಯಂಪುರ ಗ್ರಾಮದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆದು ಕೂಡಲೇ ಕುಟುಂಬದ ಇತರ ಸದಸ್ಯರೊಂದಿಗೆ ಗ್ರಾಮಕ್ಕೆ ದೌಡಾಯಿಸಿದ ಬಾಲಕಿ ಪೋಷಕರು ಜೋಡಿಯನ್ನು ಹತ್ಯೆ ಮಾಡಿ ಮಾವಿನ ಮರಕ್ಕೆ ನೇಣು ಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಸಿವಾನ್​ ಪೊಲೀಸ್​ ಠಾಣಾಧಿಕಾರಿ ಅಖಿಲೇಶ್​ ತಿವಾರಿ, ಘಟನೆ ನಡೆದ ಹಿಂದಿನ ದಿನ ಮೃತ ಬಾಲಕಿಯ ತಂದೆ ತಮ್ಮ ಮಗಳನ್ನು ಯುವಕನೊಬ್ಬ ಅಪಹರಣ ಮಾಡಿದ್ಧಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.

ಮಂಗಳವಾರ ಬೆಳಗ್ಗೆ ಯುವಕನ ತಂದೆ ಬಾಲಕಿಯ ಕುಟುಂಬಸ್ಥರ ವಿರುದ್ಧ ತಮ್ಮ ಮಗನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು ಎಂದು ಹೇಳಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು ಮಗಳು ಕೆಲ ಜಾತಿಯ ಯುವಕನನ್ನು ವರಿಸಿದ ಕಾರಣ ಮರ್ಯಾದೆಗೆ ಅಂಜಿ ಕೃತ್ಯ ಎಸಗಿರಿವುದಾಗಿ ಹೇಳಿದ್ದಾರೆ.

ಮೊದಲಿಗೆ ದಂಪತಿಗಳಿಬ್ಬರನ್ನು ಕೊಂದು ಆ ನಂತರ ಅವರ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಅವರ ಹೆಣಗಳನ್ನು ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಲಾಯಿತು ಎಂದು ಬಾಲಕಿಯ ತಂದೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com