ಅತ್ಯಾಚಾರ ಸಂತ್ರಸ್ತೆಗೆ ಥಳಿಸಿ ಮನೆಗೆ ಬೆಂಕಿ, ಸಂತ್ರೆಸ್ತೆ ಬಾಲಕಿಯ ಮಗು ಸೇರಿ ಇಬ್ಬರು ಶಿಶುಗಳ ಸ್ಥಿತಿ ಗಂಭೀರ; ಕೇಸ್ ಹಿಂಪಡೆಯುವಂತೆ ಆಗ್ರಹಿಸಿ ಕೃತ್ಯ
ಉತ್ತರಪ್ರದೇಶ; ಉನ್ನಾವೊ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಮನೆಗೆ ನುಗ್ಗಿ ಪ್ರಕರಣ ಹಿಂತೆಗೆದುಕೊಳ್ಳುವಂತೆ ಬೆದರಿಸಿ ಹಲ್ಲೆ ನಡೆಸಿ ಮನೆಗೆ ಬೆಂಕಿ ಹಚ್ಚಿರುವ ಬಗ್ಗೆ ವರದಿಯಾಗಿದೆ.
ದಲಿತ ಬಾಲಕಿಯ ಮನೆಗೆ ಬೆಂಕಿ ಹಚ್ಚಿದ ನಂತರ ಇಬ್ಬರು ಶಿಶುಗಳ ಸ್ಥಿತಿ ಗಂಭೀರವಾಗಿದೆ.ಅದರಲ್ಲಿ ಒಂದು ಅತ್ಯಾಚಾರ ಸಂತ್ರಸ್ತೆಯ 6 ತಿಂಗಳ ಮಗು ಮತ್ತು ಆಕೆಯ ಎರಡು ತಿಂಗಳ ಸಹೋದರಿ ಸೇರಿದೆ ಎಂದು ವರದಿ ಉಲ್ಲೇಖಸಿದೆ.
ಬಾಲಕಿಯ ಪುತ್ರನಿಗೆ ಶೇ. 35 ಹಾಗೂ ಸಹೋದರಿಗೆ ಶೇ. 45 ಸುಟ್ಟ ಗಾಯಗಳಾಗಿವೆ.ಗಾಯಗೊಂಡ ಮಕ್ಕಳನ್ನು ಕಾನ್ಪುರದಲ್ಲಿರುವ ಹಾಲ್ಲೆಟ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬಾಲಕಿ ಹಾಗೂ ಆಕೆಯ ತಾಯಿ ಉನ್ನಾವೊದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉನ್ನಾವೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳಾದ ಅಮನ್ ಹಾಗೂ ಸತೀಶ್ ಇತ್ತೀಚೆಗೆ ಬಿಡುಗಡೆಯಾಗಿದ್ದರು.ಬಾಲಕಿಯ ಮನೆಗೆ ಬಂದು ಪ್ರಕರಣ ಹಿಂಪಡೆಯಲು ಆಗ್ರಹಿಸಿದ್ದಾರೆ.ಇದಕ್ಕೆ ವಿರೋಧಿಸಿದಾಗ ದೊಣ್ಣೆಯಿಂದ ಥಳಿಸಿ ಮನೆಗೆ ಬೆಂಕಿ ಹಚ್ಚಿದರು ಎಂದು ಅತ್ಯಾಚಾರ ಸಂತ್ರಸ್ತೆ ಆರೋಪಿಸಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2022 ಫೆಬ್ರವರಿ 13ರಂದು ಉನ್ನಾವೊದಲ್ಲಿ ಐವರು ಯುವಕರು ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು.ಪ್ರಕರಣ ದೇಶದಲ್ಲಿ ಭಾರೀ ಸದ್ದು ಮಾಡಿತ್ತು.