2022ರಲ್ಲಿ ಭಾರತದ ಯುವ ಜನರಲ್ಲಿನ ನಿರುದ್ಯೋಗ ದರವು ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲದೇಶ ಮತ್ತು ಭೂತಾನ್‌ಗಿಂತಲೂ ಹೆಚ್ಚಾಗಿದೆ ಎಂದು ವಿಶ್ವಬ್ಯಾಂಕ್( ವರ್ಲ್ಡ್ ಬ್ಯಾಂಕ್) ಅಂಕಿ ಅಂಶಗಳು ಬಹಿರಂಗಪಡಿಸಿದೆ.
2022ರಲ್ಲಿ ಭಾರತದಲ್ಲಿನ ಯುವಕರ ನಿರುದ್ಯೋಗ ದರವು 23.22% ರಷ್ಟಿದೆ.ಪಾಕಿಸ್ತಾನದಲ್ಲಿನ ನಿರುದ್ಯೋಗ ದರವು 11.3%ರಷ್ಟಿದೆ. ಬಾಂಗ್ಲಾದೇಶದಲ್ಲಿ 12.9% ಮತ್ತು ಭೂತಾನ್‌ನಲ್ಲಿ ನಿರುದ್ಯೋಗ ದರವು 14.4% ಇದೆ ಎಂದು ವಿಶ್ವ ಬ್ಯಾಂಕ್ (ವರ್ಲ್ಡ್ ಬ್ಯಾಂಕ್) ಅಂಕಿ-ಅಂಶಗಳು ತಿಳಿಸಿದೆ.
ವರದಿಯ ಪ್ರಕಾರ 2022ರ ವರ್ಷದಲ್ಲಿ ಚೀನಾದಲ್ಲಿ ನಿರುದ್ಯೋಗ ದರವು 13.2%, ಸಿರಿಯಾದಲ್ಲಿ 22.1%, ಇಂಡೋನೇಷ್ಯಾದಲ್ಲಿ 13%, ಮಲೇಷ್ಯಾದಲ್ಲಿ 11.7%, ವಿಯೆಟ್ನಾಂನಲ್ಲಿ 7.4%, ದಕ್ಷಿಣ ಕೊರಿಯಾದಲ್ಲಿ 6.9% ಮತ್ತು ಸಿಂಗಾಪುರದಲ್ಲಿ 6.1% ರಷ್ಟಿದೆ. ಈ ಎಲ್ಲಾ ದೇಶಗಳ ನಿರುದ್ಯೋಗದ ದರಕ್ಕಿಂತ ಭಾರತದಲ್ಲಿ ನಿರುದ್ಯೋಗ ದರ ಹೆಚ್ಚಳವಾಗಿದೆ.
ಈ ಮಾಹಿತಿಯನ್ನು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯಿಂದ ಪಡೆಯಲಾಗಿದೆ. ಅಂಕಿ ಅಂಶವನ್ನು 15ರಿಂದ 24 ವರ್ಷ ವಯಸ್ಸಿನವರು ಮತ್ತು ಉದ್ಯೋಗ ಇಲ್ಲದೆ ಉದ್ಯೋಗವನ್ನು ಹುಡುಕುತ್ತಿರುವವರ ಅಂಕಿ-ಅಂಶಗಳನ್ನು ಸಂಗ್ರಹಿಸಿ ಸಿದ್ದಪಡಿಸಲಾಗಿದೆ.
15-34 ವರ್ಷ ವಯಸ್ಸಿನ ಸುಮಾರು 36% ಜನರು ಭಾರತದಲ್ಲಿ ನಿರುದ್ಯೋಗವು ಅತಿದೊಡ್ಡ ಸಮಸ್ಯೆ ಎಂದು ಹೇಳುತ್ತಿದ್ದಾರೆ ಎಂದು ಲೋಕನೀತಿ-ಸಿಎಸ್ಡಿಎಸ್ ಸಮೀಕ್ಷೆಯು ಕಂಡುಹಿಡಿದಿದೆ.
ಯುವಕರ ವೃತ್ತಿ ಆಕಾಂಕ್ಷೆಗಳು, ಉದ್ಯೋಗದ ಆದ್ಯತೆಗಳು ಮತ್ತು ನಿರೀಕ್ಷೆಗಳನ್ನು ವಿಶ್ಲೇಷಿಸಿ ಸಮೀಕ್ಷೆಯನ್ನು ಸಿದ್ದಪಡಿಸಲಾಗಿದೆ.