ಗಾಝಾದಲ್ಲಿ ಜನರ ನರಮೇಧ ನಡೆಯುತ್ತಿದ್ದರೂ ವಿಶ್ವಸಂಸ್ಥೆ ತಡೆಯಲು ವಿಫಲವಾಗಿದೆ ಎಂದು ರಾಜೀನಾಮೆ ನೀಡಿದ ಅಧಿಕಾರಿ

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್‌ ನ್ಯೂಯಾರ್ಕ್ ಕಚೇರಿಯ ನಿರ್ದೇಶಕರು ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದು, ಇಸ್ರೇಲ್‌ ಬಾಂಬ್ ದಾಳಿಯ ಮೂಲಕ ಗಾಝಾದಲ್ಲಿ ಪ್ಯಾಲೇಸ್ತೀನ್‌ ನಾಗರಿಕರ ನರಮೇಧವನ್ನು ನಡೆಸುತ್ತಿರುವಾಗ ಯುಎನ್ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಶ್ವ ಸಂಸ್ಥೆಯ ಹೈಕಮಿಷನರ್‌ ಅವರ ನ್ಯೂಯಾರ್ಕ್‌ ಕಚೇರಿಯ ನಿರ್ದೇಶಕರಾಗಿರುವ ಕ್ರೈಗ್‌ ಮೊಖಿಬರ್ ಅವರು ರಾಜೀನಾಮೆಯನ್ನು ನೀಡಿದ್ದಾರೆ. ಗಾಝಾದ ಮೇಲೆ ಇಸ್ರೇಲ್‌ ದಾಳಿಯಿಂದ ನರಮೇಧ ಸಂಭವಿಸಿದರೂ ಅಮೆರಿಕ, ಇಂಗ್ಲೆಂಡ್‌ ಹಾಗೂ ಯುರೋಪ್‌ನ ಹೆಚ್ಚಿನ ದೇಶಗಳು ಈ ಬರ್ಬರ ದೌರ್ಜನ್ಯಕ್ಕೆ ಬೆಂಬಲವಾಗಿ ನಿಂತಿವೆ ಎಂದು ಅವರು ಆರೋಪಿಸಿದ್ದಾರೆ.

ಜಿನೀವಾದಲ್ಲಿನ ಯುಎನ್ ಹೈಕಮಿಷನರ್‌ಗೆ ಕ್ರೇಗ್ ಮೊಖಿಬರ್‌ ಅ.28 ರಂದು ಪತ್ರ ಬರೆದಿದ್ದು, ಇದು ಹುದ್ದೆಯಲ್ಲಿದ್ದುಕೊಂಡು ನಿಮಗೆ ನನ್ನ ಕೊನೆಯ ಪತ್ರ ಎಂದು ಹೇಳಿಕೊಂಡಿದ್ದಾರೆ.
ಮತ್ತೊಮ್ಮೆ ನಮ್ಮ ಕಣ್ಣಿನಲ್ಲಿ ನರಮೇಧವನ್ನು ನೋಡುತ್ತಿದ್ದೇವೆ ಹಾಗೂ ವಿಶ್ವಸಂಸ್ಥೆಯು ಅದನ್ನು ನಿಲ್ಲಿಸಲು ಯಾವುದೇ ಅಧಿಕಾರ ಹೊಂದಿಲ್ಲದಂತೆ ತೋರುತ್ತಿದೆ ಎಂದು ಕ್ರೈಗ್‌ ಹೇಳಿದ್ದಾರೆ. ಕ್ರೈಗ್‌ ಅವರು ವಿಶ್ವ ಸಂಸ್ಥೆಯಲ್ಲಿ 1992ರಿಂದ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಅವರು ತಮ್ಮ ಪತ್ರದಲ್ಲಿ ರುವಾಂಡಾದಲ್ಲಿ ಟುಟ್ಸಿಗಳು, ಬೋಸ್ನಿಯಾದಲ್ಲಿ ಮುಸ್ಲಿಮರು, ಇರಾಕಿನ ಕುರ್ದಿಸ್ತಾನ್‌ನಲ್ಲಿ ಯಾಜಿದಿಗಳು ಮತ್ತು ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾಗಳ ವಿರುದ್ಧ ಈ ಹಿಂದೆ ನಡೆದ ನರಮೇಧಗಳನ್ನು ಕೂಡ ತಡೆಯಲು ಯುಎನ್ ವಿಫಲವಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು