ಚೂರಿಯಿಂದ ಇರಿದು ಯುವಕನನ್ನು ಬರ್ಬರವಾಗಿ ಕೊಲೆ

ಚೂರಿಯಿಂದ ಇರಿದು ಯುವಕನನ್ನು ಬರ್ಬರವಾಗಿ ಕೊಲೆ

ಕಲಬುರಗಿ:ಚೂರಿಯಿಂದ ಇರಿದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ನಗರದ ಆಜಾದಪುರ್ ರಸ್ತೆಯಲ್ಲಿ ನಡೆದಿದೆ.

ಉಮರ್ (23) ಕೊಲೆಯಾದ ಯುವಕ. ಉಮರ್ ಕಲಬುರಗಿ ನಗರದ ಬಿಲಾಲಾಬಾದ್ ಕಾಲೋನಿ ನಿವಾಸಿ.

ನಿನ್ನೆ ರಾತ್ರಿ ಹನ್ನೊಂದು ಮೂವತ್ತರ ಸಮಯದಲ್ಲಿ ಉಮರ್ ಗೆ ಚಾಕುವಿನಿಂದ ದೇಹದ ವಿವಿಧೆಡೆ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಉಮರ್‌ನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ‌ರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಉಮೇರ ಮೃತಪಟ್ಟಿದ್ದಾರೆ.

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆಸಲಾಗಿರುವ ಶಂಕೆ ವ್ಯಕ್ತವಾಗಿದೆ.ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ‌.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬಾರ್ ಕ್ಯಾಷಿಯರ್ ಕೊಲೆ ಆರೋಪಿ ಕಾಲಿಗೆ ಫೈರಿಂಗ್

ಶಿವಮೊಗ್ಗ: ಬಾರ್ ಕ್ಯಾಷಿಯರ್​​ ಸಚಿನ್​ ಕೊಲೆ ​ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಯ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿ ಬಂದಿಸಿದ್ದಾರೆ.

ಆರೋಪಿ ಸತೀಸ್ ನನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಸತೀಸ್ ಕಾಲಿಗೆ ಫೈರಿಂಗ್​ ಮಾಡಿ ಬಂಧಿಸಿದ್ದಾರೆ.

ಪಿಎಸ್‌ಐ ಎಸ್. ರಾಜು ರೆಡ್ಡಿ ಅವರು ಸ್ವಯಂ ರಕ್ಷಣೆಗೆ ಆರೋಪಿ ಕಾಲಿಗೆ ಫೈರಿಂಗ್​ ಮಾಡಿದ್ದರು.ಘಟನೆಯಲ್ಲಿ ಪೊಲೀಸ್‌ ಸಿಬ್ಬಂದಿ ಪ್ರವೀಣ್‌ ಮತ್ತು ಶಿವರಾಜ್​ ಗಾಯಗೊಂಡಿದ್ದಾರೆ.

ಗಾಯಾಳು ಆರೋಪಿ ಸತೀಶ್​​ನನ್ನು ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಟಾಪ್ ನ್ಯೂಸ್