ಉಳ್ಳಾಲ; ಯುವಕನನ್ನು ಚೂರಿಯಿಂದ ಇರಿದು ಕೊಲೆ

ಉಳ್ಳಾಲ:ಯುವಕನನ್ನು ಚೂರಿಯಿಂದ ಇರಿದು ಕೊಲೆ ನಡೆಸಿರುವ ಘಟನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಸಾರಸ್ವತ ಕಾಲನಿ ಎಂಬಲ್ಲಿ ನಡೆದಿದೆ‌

ಸಾರಸ್ವತ ಕಾಲನಿ ನಿವಾಸಿ ವರುಣ್(28) ಕೊಲೆಯಾದ ಯುವಕ. ಸ್ಥಳೀಯ ಸೂರಜ್ ಎಂಬಾತ ಕೃತ್ಯ ಎಸಗಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಕೊಲ್ಯ ಜಾಯ್ಲಾಂಡ್ ಶಾಲೆ ಸಮೀಪ ತಡರಾತ್ರಿ ವೇಳೆ ಸೂರಜ್ ಹಾಗೂ ಇನ್ನಿಬ್ಬರು ಮದ್ಯಪಾನ ನಡೆಸುತ್ತಿರುವುದನ್ನು ವರುಣ್ ಪ್ರಶ್ನಿಸಿದ್ದರು. ಇದರಿಂದ ವಾಗ್ವಾದ ನಡೆದು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಘಟನೆಗೆ ಸಂಬಧಿಸಿ ಸೂರಜ್ ಮತ್ತು ರವಿರಾಜ್ ಎಂಬವರನ್ನು ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟಾಪ್ ನ್ಯೂಸ್