ಉಳ್ಳಾಲ; ಹಿಟ್ ಆಂಡ್ ರನ್ ಪ್ರಕರಣದ ಗಾಯಾಳು ಯುವಕ ಮೃತ್ಯು

ಉಳ್ಳಾಲ:ಹಿಟ್ ಆಂಡ್ ರನ್ ಪ್ರಕರಣದಲ್ಲಿ ಗಾಯಾಳು ಯುವಕ‌ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮಾಡೂರು ವೈದ್ಯನಾಥ ದೈವಸ್ಥಾನ ರಸ್ತೆ ನಿವಾಸಿ ತೇಜಸ್ ಕುಲಾಲ್(28) ಮೃತ ಯುವಕ.

ಜೂ.4ರ ಭಾನುವಾರ ತಡರಾತ್ರಿ ತೇಜಸ್ ಸಂಕೋಳಿಗೆಯ ಪೆಟ್ರೋಲ್ ಬಂಕಿಗೆ ಪೆಟ್ರೋಲ್ ತುಂಬಿಸಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕೇರಳ ನೋಂದಾವಣಿಯ ಇನ್ನೋವಾ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿತ್ತು

ಗಂಭೀರ ಗಾಯಗೊಂಡಿದ್ದ ತೇಜಸನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಸಾಗಿಸಿ ನಂತರ ಮಂಗಳೂರಿನ ಕೆಎಂ ಸಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ತಲೆಗೆ ಗಂಭೀರ ಗಾಯವಾಗಿದ್ದ ತೇಜಸ್ ಕೋಮಾ ಸ್ಥಿತಿಯಲ್ಲಿದ್ದು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಕುರಿತು ಮಂಗಳೂರು ಪೊಲೀಸರು ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿ, ಕಾರನ್ನು ಪತ್ತೆಹಚ್ಚಿ ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದಾರೆ.

ತೇಜಸ್ ಸುಝಕಿ ಕಂಪನಿಯಲ್ಲಿ ಮೆಕ್ಯಾನಿಕ್ ಆಗಿದ್ದರು.ತೇಜಸ್ ತಂದೆ ರಾಮ ಕುಲಾಲ್, ತಾಯಿ ರೇವತಿ ಮತ್ತು ಸಹೋದರ ರವೀಂದ್ರ ಅವರನ್ನು ಅಗಲಿದ್ದಾರೆ.

ಟಾಪ್ ನ್ಯೂಸ್