ಉಳ್ಳಾಲದ ಯುವಕನ ಮೃತದೇಹ ಮುಂಬೈನಲ್ಲಿ ಅನುಮಾನಾಸ್ಪದವಾಗಿ ಪತ್ತೆ; ಕೊಲೆ ಶಂಕೆ

ಉಳ್ಳಾಲ;ಉಳ್ಳಾಲದ ಯುವಕನೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮುಂಬೈನ ಚರಂಡಿಯಲ್ಲಿ ಪತ್ತೆಯಾಗಿದೆ.





ಉಳ್ಳಾಲ ಗುತ್ತು ಬಂಡಿಕೊಟ್ಯ ನಿವಾಸಿ ಸುಂದರ ಎಂಬವರ ಪುತ್ರ ಸುಧೀರ್ ಕುಮಾರ್(32) ಮೃತದೇಹ ಪತ್ತೆಯಾಗಿದೆ.

ಆ.14ರಂದು ಸುಧೀರ್ ನಾಪತ್ತೆ ಬಗ್ಗೆ ಮುಂಬೈಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಅವರ ಮೃತದೇಹ ಪತ್ತೆಯಾಗಿದೆ.

ಸುದೀರ್ ಸಾವಿನಲ್ಲಿ ಕೊಲೆ ಬಗ್ಗೆ ಕೂಡ ಸಂಶಯ ವ್ಯಕ್ತವಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






ಟಾಪ್ ನ್ಯೂಸ್