ಉಳ್ಳಾಲ:ರೈಲು ಢಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಡ ಘಟನೆ ತೊಕ್ಕೊಟ್ಟು ಓಳಪೇಟೆ ಬಳಿ ನಿನ್ನೆ ರಾತ್ರಿ ನಡೆದಿದೆ.
ಬಿಹಾರ ಮೂಲದ ಶ್ರವಣ್ ದಾಸ್ (38) ಮೃತರು ಎಂದು ಗುರುತಿಸಲಾಗಿದೆ.
ಶ್ರವಣ್ ದಾಸ್ ಮೂಲತಃ ಬಿಹಾರದವಾರಾಗಿದ್ದು, ತೊಕ್ಕೊಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ ಕೆಲಸ ಮುಗಿಸಿ ಮನೆಗೆ ಬಂದು ಊಟಕ್ಕೆ ಸಾಂಬಾರ್ ತರಲೆಂದು ಹೊಟೇಲ್ ಗೆ ಹೋಗಿದ್ದು, ವಾಪಸ್ ಬರಲು ರೈಲ್ವೆ ಹಳಿ ದಾಟಿವಾಗ ರೈಲು ಢಿಕ್ಕಿ ಹೊಡೆದಿದೆ.
ರೈಲು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇವರ ಪತ್ನಿ ಮಕ್ಕಳು ಬಿಹಾರದಲ್ಲಿದ್ದು, ಶ್ರವಣ್ ದಾಸ್ ಬಾಡಿಗೆ ಕೊಠಡಿಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ.
ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಮುಂದಿನ ಕ್ರಮವನ್ನು ಪೊಲೀಸರು ಕೈಗೊಂಡಿದ್ದಾರೆ.