-ರುಕಿಯಾ(50) ಳನ್ನು ಬಂಧಿಸಲಾಗಿದೆ.ಮತ್ತೋರ್ವ ಪ್ರಮುಖ ಆರೋಪಿ ಲತೀಫ್ ಪರಾರಿಯಾಗಿದ್ದಾನೆ.
ಉಳ್ಳಾಲ:ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ದಾಳಿ ನಡೆಸಿ ಮಹಿಳೆಯನ್ನು ಬಂಧಿಸಲಾಗಿದ್ದು, ಮೂವರು ಗಿರಾಕಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಉಳ್ಳಾಲ ಪಂಡಿತ್ ಹೌಸ್ ಸಮೀಪದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರ ತಂಡ ದಾಳಿ ನಡೆಸಿದೆ. ಈ ವೇಳೆ ವೇಶ್ಯಾವಾಟಿಕೆ ಕಿಂಗ್ ಪಿನ್ ಬೋಳಂತೂರು ನಿವಾಸಿ ರುಕಿಯಾ(50) ಳನ್ನು ಬಂಧಿಸಲಾಗಿದೆ.ಮತ್ತೋರ್ವ ಪ್ರಮುಖ ಆರೋಪಿ ಲತೀಫ್ ಪರಾರಿಯಾಗಿದ್ದಾನೆ.
ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಈ ಬಂಧನ ಮಾಡಲಾಗಿದೆ.ಬಂಧಿನದ ವೇಳೆ ಪೊಲೀಸರು ನಗದು ಸೇರಿ ಹಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.