ಉಳ್ಳಾಲ:ಮನೆಯ ಬಾಗಿಲ ಲಾಕರ್ ಗೆ ಕಾಂಡೊಮ್ ಸಿಕ್ಕಿಸಿ ಬಾಲ್ಕನಿ ಮತ್ತು ಟೆರೇಸ್ ಮೇಲೆ ಒಣ ಹಾಕಿದ್ದ ಮಹಿಳೆಯರ ಬೆಲೆ ಬಾಳುವ ಸಲ್ವಾರ್, ಒಳ ಉಡುಪುಗಳನ್ನು ಕಳ್ಳತನ ಮಾಡಿ ವಿಕೃತಿ ಮೆರೆದಿರಯವ ಬಗ್ಗೆ ವರದಿಯಾಗಿದೆ.
ಉಳ್ಳಾಲ ಬೈಲಿನ ಗೇರು ಕೃಷಿ ಸಂಶೋಧನಾ ಕೇಂದ್ರದ ಬಳಿಯ ಸುಂದರ್ ಎನ್ನುವವರ ಮನೆ ಮೇಲಿರುವ ಬಾಡಿಗೆ
ಮನೆಯಲ್ಲಿ ಮಹಿಳೆ ಮತ್ತು ಆಕೆಯ ಮಗಳ ಉಡುಪು ಕಳವುಗೈಯ್ಯಲಾಗಿದೆ.
ಮಹಿಳೆಯರ ಬೆಲೆ ಬಾಳುವ ಸಲ್ವಾರ್, ಮತ್ತು ಒಳ ಉಡುಪುಗಳನ್ನು ಬಾಲ್ಕನಿ ಮತ್ತು ಟೆರೇಸ್ ಮೇಲೆ ನಿನ್ನೆ ಸಂಜೆ ಒಣ ಹಾಕಲಾಗಿತ್ತು. ಇಂದು ಬೆಳಿಗ್ಗೆ ಬಾಡಿಗೆ ಮನೆ ಯಜಮಾನ ಎದ್ದಾಗ ಮುಖ್ಯ ಬಾಗಿಲಿನ ಲಾಕರ್ಗೆ ಕಾಂಡಮ್ ಸಿಕ್ಕಿಸಿರುವುದು ಬೆಳಕಿಗೆ ಬಂದಿದೆ.
7 ಸಾವಿರ ಬೆಲೆಬಾಳುವ ಉಡುಪನ್ನು ಕಳವುಗೈಯ್ಯಲಾಗಿದೆ ಎಂದು ಆರೋಪಿಸಲಾಗಿದೆ. ಮೇಲ್ನೋಟಕ್ಕೆ ವಿಕೃತ ಕಾಮಿಗಳು ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.