ಉಳ್ಳಾಲ; ಚೂರಿಯಿಂದ ಇರಿದು ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಉಳ್ಳಾಲ ಕೋಟೆಪುರದ ಬಾಡಿಗೆ ಮನೆಯೊಂದರಲ್ಲಿ ನಡೆದಿದೆ.
ದೆಹಲಿ ಮೂಲದ 40-45 ರ ಹರೆಯದ ಮಹಿಳೆಯ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಮಹಿಳೆ ಜೊತೆಗಿದ್ದ ನಯೀಮ್ ಎಂಬಾತ ಪರಾರಿಯಾಗಿದ್ದಾನೆ.ಮೂರು ದಿನಗಳ ಹಿಂದೆ ಉಳ್ಳಾಲಕ್ಕೆ ಬಂದ ಜೋಡಿ ಬಟ್ಟೆ ವ್ಯಾಪಾರಿಗಳೆಂದು ಹೇಳಿ ಸೆಲೂನ್ ಮಾಲಕನೋರ್ವನ ಸಹಾಯದಿಂದ ಬಾಡಿಗೆ ಮನೆಯನ್ನು ಪಡೆದಿದ್ದರು.
ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.