ಮಂಗಳೂರು;ಗಾಂಜಾ ವ್ಯಸನಿಯನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸರು

ಮಂಗಳೂರು:ಗಾಂಜಾ ವ್ಯಸನಿಯೊಬ್ಬನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.

ಉಳ್ಳಾಲ ಮುಕ್ಕಚ್ಚೇರಿ ಕೈಕೋ ನಿವಾಸಿ ಅಬೂಬಕರ್ ಸಿದ್ದೀಕ್(24) ಬಂಧಿತ ಆರೋಪಿ.

ಗಾಂಜಾ ತೆಗೆದುಕೊಂಡು ಬೈಕ್ ನಲ್ಲಿ ನಿರಾತಂಕವಾಗಿ ಚಲಿಸುತ್ತಿದ್ದ ಆರೋಪಿ ಕೈಯಲ್ಲಿ ಚಾಕು, ಕಲ್ಲು ಹಿಡಿದುಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಎನ್ನಲಾಗಿದೆ.

ಈ ಕುರಿತು ಸ್ಥಳೀಯರು ಕೊಣಾಜೆ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಸಿದ್ದಿಕ್‌ನನ್ನು ಹಿಂಬದಿಯಿಂದ ಬಿಗಿಯಾಗಿ ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟಾಪ್ ನ್ಯೂಸ್