ಉಳ್ಳಾಲ;ಲಾರಿಗಳ ಮಧ್ಯೆ ಸಿಲುಕಿ ಯುವಕ ದುರ್ಮರಣ; ಮೃತ & ಲಾರಿ ಚಾಲಕ ಸಂಬಂಧಿಗಳು! ಘಟನೆ ನಡೆದಿದ್ದೆಗೆ ಗೊತ್ತಾ?

ಉಳ್ಳಾಲ;ಎರಡು ಕಂಟೈನರ್ ಲಾರಿಗಳ ನಡುವೆ ಸಿಲುಕಿ ಲಾರಿ ಚಾಲಕ ದಾರುಣವಾಗಿ ಮೃತಪಟ್ಟಿರುವ ಘಟನೆ ರಾ.ಹೆ. 66ರ ತಲಪಾಡಿ ಟೋಲ್ ಗೇಟ್ ಸಮೀಪ ಗುರುವಾರ ತಡರಾತ್ರಿ ಸಂಭವಿಸಿದೆ.

ಹರ್ಯಾಣ ಮೂಲದ ಶಮೀಮ್ (38) ಮೃತ ಚಾಲಕ ಎಂದು ಗುರುತಿಸಲಾಗಿದೆ.

ಒಂದೇ ಸಂಸ್ಥೆಗೆ ಸೇರಿದ, ಸಂಬಂಧಿ ಚಾಲಕರು ಎರಡು ಕಂಟೈನರ್ ಲಾರಿಗಳಲ್ಲಿ ಹರಿಯಾಣದಿಂದ ಕೇರಳ ಕಡೆಗೆ ಸರಕು ಸಾಗಾಟ ಮಾಡುತ್ತಿದ್ದರು.ತಲಪಾಡಿ ಟೋಲ್ ಸಮೀಪ ಚಹಾ ಕುಡಿಯಲೆಂದು ಚಾಲಕ ಶಮೀಮ್ ತನ್ನ ಕಂಟೈನರ್ ಲಾರಿಯನ್ನು ನಿಲ್ಲಿಸಿ ಲಾರಿ ಮುಂದೆ ನಿಂತಿದ್ದರು.

ಇದೇ ಸಂದರ್ಭ ಅದೇ ಸಂಸ್ಥೆಗೆ ಸೇರಿದ ಇನ್ನೊಂದು ಲಾರಿಯ ಚಾಲಕ, ಶಮೀಮ್ ನಿಲ್ಲಿಸಿದ್ದ ಲಾರಿಯ ಮುಂದೆ ಹೋಗಿ ನಿಲ್ಲಿಸಿದ್ದರು.ಈ ವೇಳೆ ಎದುರಿನಲ್ಲಿ ನಿಲ್ಲಿಸಿದ್ದ ಲಾರಿ ಏಕಾಏಕಿ ಹಿಂದೆ ಚಲಿಸಿ ಶಮೀಮ್ ಎರಡು ಲಾರಿಗಳ ನಡುವೆ ಸಿಲುಕಿದ್ದಾರೆ.

ಗಾಯಗೊಂಡ ಶಮೀಮ್ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಂಭೀರ ರೀತಿಯಲ್ಲಿ ಗಾಯಗಳಾದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತ ಶಮೀಮ್ ಹಾಗೂ ಅಪಘಾತಕ್ಕೀಡಾದ ಲಾರಿ ಚಾಲಕ ಸಹೋದರ ಸಂಬಂಧಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ಟಾಪ್ ನ್ಯೂಸ್