ಉಳ್ಳಾಲ:ಮೆಹಂದ ದಿನ ಮದುಮಗ ನಾಪತ್ತೆ ಹಿನ್ನೆಲೆ ಮದುವೆ ರದ್ದಾಗಿತ್ತು.ಇದೀಗ ಪ್ರಕರಣದಲ್ಲಿ ಟ್ವಿಸ್ಟ್ ಪಡೆದುಕೊಂಡಿದೆ.ಮದುಮಗ ಬಳ್ಳಾರಿಯಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ ಎನ್ನಲಾಗಿದೆ.
ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ ಐತಪ್ಪ ಶೆಟ್ಟಿ ಅವರ ಪುತ್ರ ಕಿಶನ್ ಶೆಟ್ಟಿ ಮೆಹಂದಿ ಶಾಸ್ತ್ರದ ದಿನ ಮನೆಯಿಂದ ಹಣ್ಣು ತರಲೆಂದು ಹೋದವರು ಮನೆಗೆ ಬಂದಿಲ್ಲ.ಆತಂಕಗೊಂಡ ಪೋಷಕರಿ ಕೊಣಾಜೆ ಠಾಣೆಗೆ ದೂರು ನೀಡಿದ್ದರು.
ಘಟನೆ ಬಳಿಕ ನಿಗದಿಯಾಗಿದ್ದ ಮದುವೆ ರದ್ದಾಗಿತ್ತು.
ಭಾನುವಾರ ಕಿಶನ್ ಶೆಟ್ಟಿ ತನ್ನ ತಂಗಿಗೆ ಮೊಬೈಲ್ ಸಂದೇಶ ಕಳುಹಿಸಿ ನಾನು ಬಳ್ಳಾರಿಯಲ್ಲಿದ್ದೇನೆ.ಇನ್ನು ಮುಂದೆ ಮನೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ನಾನು ಬಳ್ಳಾರಿಯಲ್ಲಿ ಇದ್ದು, ಸ್ಕೂಟರ್ ಮೆಲ್ಕಾರ್ ಆರ್‌ಟಿಒ ಕಚೇರಿ ಮುಂದೆ ಇಟ್ಟಿದ್ದೇನೆ.ಆದರೆ ಇನ್ನು ಮುಂದೆ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ.
ತಕ್ಷಣ ಆತನಿಗೆ ತಂಗಿ ಕರೆ ಮಾಡಲು ಯತ್ನಿಸಿದ್ದಾರೆ. ಆದರೆ ಕಿಶನ್ ಶೆಟ್ಟಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ.ಈ ಬಗ್ಗೆ ಕಿಶನ್ ತಂದೆ ಐತಪ್ಪ ಶೆಟ್ಟಿ ಅವರು ಕೊಣಾಜೆ ಠಾಣೆಗೆ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.