ಉಳ್ಳಾಲ; ಬೀಚ್ ಗೆ ಕುಟುಂಬಸ್ಥರ ಜೊತೆ ತೆರಳಿದ್ದ ವ್ಯಕ್ತಿ ಸಮುದ್ರ ಪಾಲು

ಉಳ್ಳಾಲ;ಕುಟುಂಬಸ್ಥರ ಜೊತೆ ದರ್ಗಾ ಝಿಯಾರತ್ ಗೆಂದು ತೆರಳಿದ್ದ ವ್ಯಕ್ತಿಯೋರ್ವರು ಸಮುದ್ರ ಪಾಲಾದ ಘಟನೆ ಉಳ್ಳಾಲ ಬೀಚ್ ನಲ್ಲಿ ನಡೆದಿದೆ.

ಸಮುದ್ರ ಪಾಲಾದ ವ್ಯಕ್ತಿಯನ್ನು ಮಳಲಿ ನಿವಾಸಿ ಖಾಲಿದ್ (51) ಎಂದು ಗುರುತಿಸಲಾಗಿದೆ.

ಖಾಲಿದ್ ಅವರು ತನ್ನ ಪತ್ನಿ, ಮಕ್ಕಳ ಜೊತೆ ಉಳ್ಳಾಲ ಝಿಯಾರತ್ ಗೆಂದು ತೆರಳಿದ್ದರು.ಝಿಯಾರತ್ ಮುಗಿಸಿದ ಬಳಿಕ ಉಳ್ಳಾಲ ಬೀಚ್ ಗೆ ವಿಹಾರಕ್ಕೆ ಹೋಗಿ ಸಮುದ್ರಕ್ಕೆ ಇಳಿದಿದ್ದರು.ಈ ವೇಳೆ ಸಮುದ್ರ ಅಲೆಗೆ ಖಾಲಿದ್ ಹಾಗೂ ಅವರ ಮಗ ಸಿಲುಕಿ ಸಮುದ್ರಪಾಲಾಗಿದ್ದಾರೆ‌.

ಈ ಬಗ್ಗೆ ಮಾಹಿತಿ ಪಡೆದ ಈಜುಗಾರರು ಬಾಲಕನಿಗೆ ರಕ್ಷಿಸಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಖಾಲಿದ್ ರನ್ನು ರಕ್ಷಣೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರು ಆ ವೇಳೆಗೆ ಸಮುದ್ರ ಪಾಲಾಗಿದ್ದಾರೆ.ಬಳಿಕ ಮೃತದೇಹ ಮೇಲಕ್ಕೆತ್ತಲಾಗಿದೆ.

ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

ಹಿಂದೂ ಯುವತಿಯನ್ನು “ಕೇರಳ ಸ್ಟೋರಿ” ವೀಕ್ಷಿಸಲು ಕರೆದೊಯ್ದ ಸಂಸದೆ ಪ್ರಜ್ಞಾ ಸಿಂಗ್; ಆಕೆ ಸಿನಿಮಾ ನೋಡಿದ ಮರುದಿನವೇ ತನ್ನ ಮುಸ್ಲಿಂ ಪ್ರೇಮಿಯೊಂದಿಗೆ ಪರಾರಿ!- ವರದಿ

ಭೋಪಾಲ್‌; 19 ವರ್ಷದ ಹಿಂದೂ ಸಮುದಾಯದ ನರ್ಸಿಂಗ್ ವಿದ್ಯಾರ್ಥಿನಿ ತನ್ನ ನಿಗದಿಯಾಗಿದ್ದ ಮದುವೆಗೆ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com