ಉಜಿರೆ; ಬೈಕ್ ಅಪಘಾತದ ಗಾಯಾಳು ವಿದ್ಯಾರ್ಥಿ ಮೃತ್ಯು

ಬೆಳ್ತಂಗಡಿ: ಬೈಕ್ ಅಪಘಾತದ ಗಾಯಾಳು ವಿದ್ಯಾರ್ಥಿ ಮೃತಪಟ್ಟ ಘಟನೆ ಉಜಿರೆಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಕಲ್ಮಂಜ ಗ್ರಾಮದ ದೀಕ್ಷಿತ್(20) ಎಂದು ಗುರುತಿಸಲಾಗಿದೆ.

ಉಜಿರೆಯ ಖಾಸಗಿ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿಯಾಗಿದ್ದ ದೀಕ್ಷಿತ್ ನಿನ್ನೆ ಮಧ್ಯಾಹ್ನ ಊಟ ಮಾಡಿ ಕಾಲೇಜಿಗೆ ಮರಳುತ್ತಿರುವಾಗ ಬೈಕ್ ನ ಸ್ಟ್ಯಾಂಡ್ ತೆಗೆಯದೆ ಚಲಾಯಿಸಿಕೊಂಡು ಬಂದು ಬೈಕ್ ಡಿವೈಡರ್ ಗೆ ಢಿಕ್ಕಿಯಾಗಿ ಅಪಘಾತ ನಡೆದಿದೆ.

ಘಟನೆಯಲ್ಲಿ ತಲೆಗೆ ಗಂಭೀರವಾದ ಗಾಯಗಳಾದ್ದರಿಂದ
ದೀಕ್ಷಿತ್ ಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್