ಉಡುಪಿ: ಸ್ಕೂಟರಿಗೆ ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತಪಟ್ಟ ಘಟನೆ ಅಂಬಾಗಿಲು- ಕಲ್ಸಂಕ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಹನುಮಂತನಗರದ ನಿವಾಸಿ ರವಿಚಂದ್ರ(57) ಎಂದು ಗುರುತಿಸಲಾಗಿದೆ.
ರವಿಚಂದ್ರ ಅವರು ಅಂಬಾಗಿಲು- ಕಲ್ಸಂಕ ರಸ್ತೆಯಲ್ಲಿ ದುರ್ಗಾ ಜನರಲ್ ಸ್ಟೋರ್ ಎದುರು ತನ್ನ ಸ್ಕೂಟರ್ ನ್ನು ಡಿವೈಡರ್ ಬಳಿ ಸೂಚನೆ ನೀಡಿ ತಿರುಗಿಸುತ್ತಿರುವಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಮಾರುತಿ ಆಲ್ಟೋ ಕಾರು ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಕಾರು ಢಿಕ್ಕಿ ವೇಳೆ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ರವಿಚಂದ್ರ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು.ಅವರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಆ ಬಳಿಕ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಈ ಕುರಿತು ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.