ಬೆಂಗಳೂರು:ಉಡುಪಿ ಕಾಲೇಜುವೊಂದರಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣವಾಗಿದೆ ಎಂದು ಭುಗಿಲೆದ್ದ ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ಗೃಹ ಸಚಿವ ಪರಮೇಶ್ವರ್,
ಇಂತಹ ಘಟನೆಗಳು ಸ್ನೇಹಿತರ ಬಳಗದಲ್ಲಿ ನಡೆಯುತ್ತದೆ, ಅದೆಲ್ಲ ಅಲ್ಲಿಗೆ ಬಿಟ್ಟು ಹೋಗುತ್ತಿತ್ತು ಎಂದು ಹೇಳಿದ್ದು, ಅಂತಹ ಘಟನೆ ಕುರಿತು ಪ್ರಾಂಶುಪಾಲರು ಕ್ರಮ ಕೈ ತೆಗೆದುಕೊಳ್ಳಲು ಬಿಡಬೇಕು. ಇಲ್ಲಿ ಸಸ್ಪೆಂಡ್ ಮಾಡುವುದೋ ಅಥವಾ ಇನ್ನು ಹೆಚ್ಚಿನ ಕ್ರಮ ಬೇಕೋ ಇದೆಲ್ಲವೂ ಅವರಿಗೆ ಸಂಬಂಧಪಟ್ಟಿದ್ದು ಎಂದು ಹೇಳಿದ್ದಾರೆ.
ಇದಲ್ಲದೆ ಮಣಿಪುರಕ್ಕೆ ಹೋಗದ ಮಹಿಳಾ ಆಯೋಗ ಉಡುಪಿಗೆ ಬಂದಿದ್ದಾರೆ.ನಾವು ಕಾಲೇಜು ವಿಚಾರಕ್ಕೆ ಮಧ್ಯಪ್ರವೇಶ ಮಾಡಬಾರದು. ಇನ್ನು ಘಟನೆ ಕುರಿತು ಈಗಾಗಲೇ ಪೊಲೀಸರು ಸೊಮೋಟೋ ದಾಖಲಿಸಿಕೊಂಡಿದ್ದಾರೆ.ಈ ಕುರಿತು ಸೂಕ್ತ ತನಿಖೆ ಆಗುತ್ತೆ, ಸತ್ಯಾ ಸತ್ಯತೆ ಹೊರ ಬರುತ್ತೆ ಎಂದಿದ್ದಾರೆ.
ಉಡುಪಿ;ಎಬಿವಿಪಿ ಪ್ರತಿಭಟನೆ
ಉಡುಪಿ;ಪ್ಯಾರಾ ಮೆಡಿಕಲ್ ಕಾಲೇಜೊಂದರಲ್ಲಿ ವಿಡಿಯೋ ಚಿತ್ರೀಕರಣ ವಿವಾದ ಘಟನೆ ಸಂಬಂಧಿಸಿದಂತೆ ಇಂದು ಎಬಿವಿಪಿ ವಿದ್ಯಾರ್ಥಿಗಳು ಅಜ್ಜರಕಾಡಿನ ಹುತಾತ್ಮರ ಸ್ಮಾರಕ ಬಳಿ ಪ್ರತಿಭಟನೆ ನಡೆಸಿದರು.
ಸಂತ್ರಸ್ತೆ ವಿಧ್ಯಾರ್ಥಿನಿಗೆ ನ್ಯಾಯ ಒದಗಿಸಿ ಕೊಡಬೇಕು, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಯಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ.ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು.
ಬಳಿಕ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರರವರು ಆಗಮಿಸಿ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ, ಅವರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.