ಉಡುಪಿ; ಮನೆಗೆ ನುಗ್ಗಿ ನಾಲ್ವರ ಹತ್ಯೆ ಪ್ರಕರಣ; ಆರೋಪಿ ಕುರಿತು ಮಹತ್ವದ ಮಾಹಿತಿ ನೀಡಿದ ಆಟೋ ಚಾಲಕ

ಉಡುಪಿ ಮಲ್ಪೆ ಸಮೀಪದ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂದಿಸಿ ಆರೋಪಿ ಬಗ್ಗೆ ರಿಕ್ಷಾ ಚಾಲಕನೋರ್ವ ಮಹತ್ವದ ಸುಳಿವನ್ನು ನೀಡಿದ್ದಾರೆ.

ರಿಕ್ಷಾ ಚಾಲಕ ಶ್ಯಾಮ್ ಹೇಳಿದ್ದೇನು?

ಬಿಳಿ ಬಣ್ಣದ ಶರ್ಟ್, ಬಿಳಿ ಬಣ್ಣದ ಮಾಸ್ಕ್ ಧರಿಸಿದ ಬೋಳು ತಲೆಯ ಅಪರಿಚಿತ ವ್ಯಕ್ತಿಯೊಬ್ಬ ಆಟೋದಲ್ಲಿ ಬಂದಿದ್ದಾನೆ.ಆತನ ಕೈಯಲ್ಲಿ ಬ್ಯಾಗ್ ಇತ್ತು. ಆತ ಸ್ಥಳಕ್ಕೆ ಡ್ರಾಪ್ ಮಾಡಿದ ಕೇವಲ 15 ನಿಮಿಷಗಳಲ್ಲಿ ಮರಳಿ ಸಂತೆಕಟ್ಟೆಗೆ ಬಂದಿದ್ದಾನೆ ಎಂದು ಹೇಳಿದ್ದಾರೆ‌‌.

ನಾನು ಅವನನ್ನು ಆತ ಹೇಳಿದ ವಿಳಾಸದ ಮನೆಗೆ ಡ್ರಾಪ್ ಮಾಡಿದ್ದೆ. ಆತ ಮುಖಕ್ಕೆ ಮಾಸ್ಕ್ ಧರಿಸಿದ್ದು, ಬೋಳು ತಲೆಯನ್ನು ಹೊಂದಿದ್ದ. ಜೊತೆ ಆತನ ಕೈಯಲ್ಲಿ ಬ್ಯಾಗ್ ಕೂಡ ಇತ್ತು.ನಾನು ಅವನನ್ನು ಇಳಿಸಿದ 15 ನಿಮಿಷಗಳಲ್ಲಿ ಆತ ಮತ್ತೆ ವಾಪಸ್ ನನ್ನ ಬಳಿ ಬಂದಿದ್ದ. ಆದರೆ ಘಟನೆಯ ಬಗ್ಗೆ ಏನೂ ತಿಳಿಯದೆ ನಾನು ಅವನಿಗಾಗಿ ಕಾಯುತ್ತಿದ್ದೆ. ಆದರೆ ಆತ ಇನ್ನೊಂದು ಆಟೋವನ್ನು ತೆಗೆದುಕೊಂಡು ಬೇಗ ಹೊರಡಲು ಹೇಳಿದ್ದಾನೆ.

ಎರಡನೇ ಆಟೋ ಡ್ರೈವರ್ ಅವರನ್ನು ಕರಾವಳಿ ಬೈಪಾಸ್‌ನಲ್ಲಿ ಡ್ರಾಪ್ ಮಾಡಿದರು. ಆ ವ್ಯಕ್ತಿ ಬೆಂಗಳೂರು ಉಚ್ಚಾರಣೆಯ ಕನ್ನಡವನ್ನು ಮಾತನಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಕಾರವಳಿಯನ್ನೇ ಬೆಚ್ಚಿಬೀಳಿಸಿದ ಕೊಲೆ ಪ್ರಕರಣದಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್