ಮಂಗಳೂರು;2012ರ ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಉದಯ ಜೈನ್, ಧೀರಜ್ ಕೆಲ್ಲ, ಮಲ್ಲಿಕ್ ಜೈನ್ ಪತ್ರಿಕಾಗೋಷ್ಟಿ ನಡೆಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ದುಡ್ಡು ಮಾಡುವ ಉದ್ದೇಶದಿಂದ ಸೌಜನ್ಯಾ ಮನೆಯವರನ್ನು ತಲೆಕೆಡಿಸಿ ತನಿಖೆಗೆ ಹಾಜರಾಗಿದ್ದರೂ ನಮ್ಮ ಮೇಲೆ ಸುಖಾಸುಮ್ಮನೆ ಅತ್ಯಾಚಾರ, ಕೊಲೆ ಆರೋಪ ಮಾಡಿದ್ದಾರೆ.ಅವರಿಗೆ ಅಣ್ಣಪ್ಪನ ಮೇಲೆ ಭಕ್ತಿ ಇಲ್ಲದಿದ್ದರೂ ಧರ್ಮಸ್ಥಳಕ್ಕೆ ಆಣೆ ಪ್ರಮಾಣಕ್ಕೆ ಕರೆಯುತ್ತಾರೆ ಎಂದು ಆರೋಪ ಮಾಡಿದರು.
ಸೌಜನ್ಯಾ ಅತ್ಯಾಚಾರ, ಕೊಲೆ ಮಾಡಿಲ್ಲವೆಂದು ಕಾನತ್ತೂರು ಕ್ಷೇತ್ರಕ್ಕೆ ಬಂದು ಆಣೆ – ಪ್ರಮಾಣ ಮಾಡುತ್ತೇವೆ ಎಂದು ಹೇಳಿದರು.
ಒಂದು ವಾರದೊಳಗೆ ನಾವು ಆಣೆ-ಪ್ರಮಾಣವನ್ನು ಮಾಡಲಿದ್ದೇವೆ. ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯಾ ಮನೆಯವರು ಹಾಗೂ ಮಾಧ್ಯಮಗಳ ಸಮಕ್ಷಮದಲ್ಲಿಯೇ ನಾವು ಕಾನತ್ತೂರು ಕ್ಷೇತ್ರದಲ್ಲಿ ಆಣೆ ಮಾಡಲಿದ್ದೇವೆ. ಈ ಪ್ರಕರಣದ ಬಗ್ಗೆ 2014ರ ಜುಲೈ ಹಾಗೂ ಆಗಸ್ಟ್‌ನಲ್ಲಿ ಸಿಬಿಐ ಬೆಳ್ತಂಗಡಿಯಲ್ಲಿ ಎರಡೆರಡು ಬಾರಿ ತನಿಖೆ ಮಾಡಿತ್ತು. ಚೆನ್ನೈ, ಬೆಂಗಳೂರಿಗೂ ಕರೆಸಿ ತನಿಖೆ ಮಾಡಿತ್ತು.
ರಕ್ತ ಪರೀಕ್ಷೆ, ಡಿಎನ್‌ಎ ತಪಾಸಣೆ, ಮಂಪರು ಪರೀಕ್ಷೆಯನ್ನೂ ನಡೆಸಿತ್ತು. ಆದರೂ ನಮ್ಮ ಮೇಲೆ ಈಗಲೂ ಆರೋಪ ಹೊರಿಸುತ್ತಿರುವುದು ಸರಿಯಲ್ಲ. ಆದ್ದರಿಂದ ತಿಮರೋಡಿ ಎಷ್ಟು ದೊಡ್ಡ ರೌಡಿಯಾದರೂ ನಾವು ಎದುರಿಸುತ್ತೇವೆ. ತಿಮರೋಡಿ ನೈಜ ಆರೋಪಿಗಳ ಪತ್ತೆಗೆ ಐಜಿ ಕಚೇರಿಗೆ ಹೋಗಿ ಧರಣಿ ಮಾಡಲಿ ಎಂದು ಹೇಳಿದ್ದಾರೆ.
ನಮ್ಮ ರಕ್ತ ಪರೀಕ್ಷೆ, ಡಿಎನ್‌ಎ ಪರೀಕ್ಷೆ, ಮಂಪರು ಪರೀಕ್ಷೆ (ಬ್ರೈನ್ ಮ್ಯಾಪಿಂಗ್) ಕೂಡ ಸಿಬಿಐ ಮಾಡಿದೆ. ಮೊಬೈಲ್ ಲೊಕೇಶನ್ ಟ್ರೇಸ್, ಸುಳ್ಳು ಪತ್ತೆಯ ಪಾಲಿಗ್ರಾಫ್ ಟೆಸ್ಟ್ ಜೊತೆ ಅನೇಕ ವೈಜ್ಞಾನಿಕ ಪರೀಕ್ಷೆ ಮಾಡಲಾಗಿದೆ. 2015ರ ಫೆಬ್ರವರಿ 23ರಂದು ನಮ್ಮ ಮನವಿ ಮೇರೆಗೆ ಸಿಬಿಐ ಬೆಂಗಳೂರಿನ ಕೋರ್ಟ್‌ಗೆ ಬ್ರೈನ್ ಮ್ಯಾಪಿಂಗ್‌ಗೆ ಅರ್ಜಿ ಹಾಕಿತ್ತು. ಕೋರ್ಟ್ ಅನೇಕ ಬಾರಿ ಇದರ ಅಡ್ಡ ಪರಿಣಾಮಗಳ ಬಗ್ಗೆ ಹೇಳಿತ್ತು. ಆದರೆ ನಮ್ಮ ಮನವಿ ಮೇರೆಗೆ ಕೋರ್ಟ್ ಮಂಪರು ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್‌ಗೆ ಅನುಮತಿ ನೀಡಿತ್ತು.
ಕೊನೆಗೆ ಎಲ್ಲಾ ತನಿಖೆ ಬಳಿಕ ಸಿಬಿಐ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಆದರೆ ಆ ಆರೋಪ ಪಟ್ಟಿಯಲ್ಲಿ
ಎಲ್ಲೂ ನಮ್ಮನ್ನು ಅಪರಾಧಿ ಮಾಡಿಲ್ಲ. ಆದರೆ ಮತ್ತೆ ಸೌಜನ್ಯ ತಂದೆ ನಮ್ಮನ್ನು ಸಹ ಆರೋಪಿ ಮಾಡಲು ಅರ್ಜಿ ಹಾಕಿದ್ದರು. ಆದರೆ ನಮ್ಮ ಅನುಪಸ್ಥಿತಿಯಲ್ಲಿ ಕೋರ್ಟ್ ನಮಗೆ ಸಮನ್ಸ್ ನೀಡಿತ್ತು. ಹೀಗಾಗಿ ನಾವು ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದಾಗ ನ್ಯಾಯಾಲಯ ಸಿಬಿಐ ಆರೋಪ ಪಟ್ಟಿ ಉಲ್ಲೇಖಿಸಿತು.
ನಮ್ಮ ವಿರುದ್ದ ಯಾವುದೇ ಸಾಕ್ಷ್ಯ, ಆರೋಪಗಳಿಲ್ಲದ ಕಾರಣ ಆರೋಪಿ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ತಂದೆಯ ಮನವಿ ರದ್ದು ಮಾಡಿತ್ತು. ಇದೀಗ ಇಡೀ ಕೇಸ್‌ನಲ್ಲಿ ಸಿಬಿಐ ಕೋರ್ಟ್ ತೀರ್ಪು ಕೊಟ್ಟಿದೆ. ಹೀಗಿದ್ದರೂ ಮಹೇಶ್ ಶೆಟ್ಟಿ ಮತ್ತೆ ನಮ್ಮ ವಿರುದ್ದ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಮಾಧ್ಯಮಗಳ ಎದುರು ಬಂದು ನಮ್ಮ ವಿರುದ್ದ ಆರೋಪ ಮಾಡುತ್ತಿದ್ದಾನೆ.
ಹೀಗಾಗಿ ನಾವು ಮತ್ತೆ ಅವರನ್ನು ಆಣೆ ಪ್ರಮಾಣಕ್ಕೆ ಕರೀತಾ ಇದೇವೆ. ತಿಮರೋಡಿ ಅವನ ಅಪ್ಪನಿಗೆ ಹುಟ್ಟಿದ್ದರೆ ಆಣೆ ಪ್ರಮಾಣಕ್ಕೆ ಬರಲಿ. ಕಾನತ್ತೂರು ನಾಲ್ವರ್ ದೈವಗಳ ಎದುರು ಬಂದು ಆಣೆ ಮಾಡಲಿ ಎಂದು ಧಿರಜ್ ಕೆಲ್ಲಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಆರೋಪ ಹೊತ್ತಿದ್ದ ಧರ್ಮಸ್ಥಳದ ಧೀರಜ್ ಕೆಲ್ಲ, ಉದಯ ಜೈನ್, ಹಾಗೂ ಮಲ್ಲಿಕ್ ಜೈನ್ ಉಪಸ್ಥಿತರಿದ್ದರು.