ಯುಎಇ; ಕೇರಳಿಗರದ್ದು ಸೇರಿ ಹಲವು ಅಂಗಡಿಗಳು ಬೆಂಕಿಗೆ ಆಹುತಿ, ಅಪಾರ ನಷ್ಠ

ಯುಎಇ;ಯುಎಇ ರಾಸಲ್ ಖೈಮ್ ದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರತೀಯರದ್ದು ಸೇರಿ ಹಲವು ಅಂಗಡಿಗಳು ಧ್ವಂಸವಾಗಿದೆ.

ನಖೀಲ್ ಅಲ್ ಹುದೈಬಿ ಪ್ರದೇಶದಲ್ಲಿ ಘಟನೆ‌ ನಡೆದಿದೆ.ಕೇರಳದ ವ್ಯಕ್ತಿಯ ಮಾಲಕತ್ವದ ಕಾರುಗಳ ಬಿಡಿಭಾಗಗಳ ಅಂಗಡಿ ಸೇರಿ ಐದು ಅಂಗಡಿಗಳಿಗೆ ಬೆಂಕಿ ಆವರಿಸಿ ಅಪಾರ ನಷ್ಟವಾಗಿದೆ ಎಂದು ಹೇಳಲಾಗಿದೆ.

ಬೆಂಕಿ ಅವಘಡಕ್ಕೆ ಕಾರಣ ತಿಳಿದು‌ಬಂದಿಲ್ಲ.ಆದರೆ ಘಟನೆಯಲ್ಲಿ ಅಂಗಡಿಗಳು ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ.

ಸ್ಥಳದಲ್ಲಿ ಅಗ್ನಿ ಶಾಮಕದಳವನ್ನು ತರಿಸಿ ಬೆಂಕಿ ನಂದಿಸುವ ಕಾರ್ಯ ನಡೆದಿದೆ.ಅಂಗಡಿಗಳಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲಾಗಿದೆ.

ಟಾಪ್ ನ್ಯೂಸ್