261 ಗಂಟೆಗಳ ಕಾಲ ಅನ್ನ, ನೀರಿಲ್ಲದೆ ಭೂಕಂಪ ಪೀಡಿತ ಟರ್ಕಿಯಲ್ಲಿ ಅವಶೇಷಗಳಡಿಯಿಂದ ಬದುಕಿ ಬಂದ ಯುವಕ

ಟರ್ಕಿ;ಟರ್ಕಿಯಲ್ಲಿ ಭೂಕಂಪನದ ವೇಳೆ ಅವಶೇಷಗಳಡಿ ಸಿಲುಕಿದ್ದ 33 ವರ್ಷದ ಮುಸ್ತಫಾ ಅವ್ಸಿ 261 ಗಂಟೆಗಳ ಕಾಲ ಅನ್ನ, ನೀರಿಲ್ಲದೆ ಅವಶೇಷಗಳಡಿಯಿಂದ ಅಚ್ಚರಿಯಾಗಿ ಬದುಕಿ‌ ಬಂದಿದ್ದಾರೆ.

ಖಾಸಗಿ ಆಸ್ಪತ್ರೆಯೊಂದರ ಅವಶೇಷಗಳಡಿಯಲ್ಲಿ ಮುಸ್ತಫಾ ಮಲಗಿದ್ದರು.ರಕ್ಷಣೆ ಬಳಿಕ ಮೊದಲ ಬಾರಿಗೆ ತಮ್ಮ ಕುಟುಂಬದೊಂದಿಗೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಟರ್ಕಿಯ ಆರೋಗ್ಯ ಸಚಿವರು ಈ ವಿಡಿಯೋ ಪೋಸ್ಟ್​ ಮಾಡಿದ್ದು, ಮುಸ್ತಫಾ, ಸ್ಟ್ರೆಚರ್ ಮೇಲೆ ಮಲಗಿ ಕುಟುಂಬದ ಜೊತೆ ಫೋನ್ ನಲ್ಲಿ ಮಾತನಾಡುವುದನ್ನು ಕಾಣಬಹುದಾಗಿದೆ.

ಇನ್ನು ಮುಸ್ತಫಾ ರಕ್ಷಣೆ ಮಾಡಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಮುಸ್ತಫಾ ಫೋನ್ ಹಿಡಿದಿರುವ ರಕ್ಷಕನ ಕೈಯನ್ನು ಚುಂಬಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com