ಟರ್ಕಿ;ಯುಎಇ (CNN) ಫೆಬ್ರವರಿ 6 ರಂದು ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪವು 55,000 ಜನರನ್ನು
ಬಲಿ ಪಡೆದಿದೆ.
ಸುಮಾರು ಹನ್ನೆರಡು ನಗರಗಳಲ್ಲಿ ಲಕ್ಷಾಂತರ ಜನರು ನಿರಾಶ್ರಿತರಾದರು ಮತ್ತು 34 ಶತಕೋಟಿ ನಷ್ಠವಾಗಿದೆ ಎಂದು ಕೆಲ ವರದಿಯಿಂದ ಅಂದಾಜಿಸಲಾಗಿದೆ.
ದೇಶದ ವಾರ್ಷಿಕ ಆರ್ಥಿಕ ಉತ್ಪಾದನೆಯ ಸರಿಸುಮಾರು 4% ನಷ್ಠವಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.ಭೂಕಂಪದ ಪರೋಕ್ಷ ವೆಚ್ಚವು ತುಂಬಾ ಹೆಚ್ಚಿರಬಹುದು, ಮತ್ತು ಚೇತರಿಕೆ ಸುಲಭ ಅಥವಾ ತ್ವರಿತವಾಗಿರುವುದಿಲ್ಲ ಎಂದು ವಿಶ್ವಬ್ಯಾಂಕ್ ಹೇಳಿದೆ.
ಟರ್ಕಿಶ್ ಎಂಟರ್‌ಪ್ರೈಸ್ ಮತ್ತು ಬಿಸಿನೆಸ್ ಕಾನ್ಫೆಡರೇಶನ್ ಭೂಕಂಪದ ಒಟ್ಟು ವೆಚ್ಚವನ್ನು 84.1 ಶತಕೋಟಿ ಎಂದು ಅಂದಾಜಿಸಿದೆ, ಅದರಲ್ಲಿ ಸಿಂಹ ಪಾಲು ವಸತಿಗಾಗಿ, 70.8 ಶತಕೋಟಿ, ಕಳೆದುಹೋದ ರಾಷ್ಟ್ರೀಯ ಆದಾಯವು $10.4 ಶತಕೋಟಿ ಮತ್ತು $2.91 ಶತಕೋಟಿ ಕೆಲಸದ ದಿನಗಳನ್ನು ಕಳೆದುಕೊಂಡಿದೆ ಎಂದು ವರದಿ ತಿಳಿಸಿದೆ.
ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಅಂದಾಜು ನಷ್ಟವು 100 ಶತಕೋಟಿ ಡಾಲರ್‌ಗಳನ್ನು ಮೀರುತ್ತದೆ ಎಂದು ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಂ (ಯುಎನ್‌ಡಿಪಿ) ವರದಿ ಮಾಡಿದೆ.
ದುರಂತದಿಂದ ಸುಮಾರು 20 ಲಕ್ಷ ಜನರು ಪ್ರದೇಶದಿಂದ ವಲಸೆ ಹೋಗಿ ತಾತ್ಕಾಲಿಕ ವಸತಿ ಕಂಡುಕೊಂಡಿದ್ದಾರೆ ಎಂದು ಟರ್ಕಿ ಸರ್ಕಾರ ದೃಢಪಡಿಸಿದೆ. ಸುಮಾರು 15 ಲಕ್ಷ ಜನರು ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ.46,000 ಜನರು ಕಂಟೈನರ್ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಂಕಿ- ಅಂಶಗಳು ತಿಳಿಸಿದೆ.