ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಮೃತರ ಸಂಖ್ಯೆ 26,000 ಗಡಿ ದಾಟಿದೆ. ಅಚ್ಚರಿ ಎಂದರೆ ಯುವಕನೋರ್ವ 94 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಸಿಲುಕಿ ತನ್ನ ಮೂತ್ರವನ್ನು ಕುಡಿದು ಬದುಕಿ ಬಂದಿದ್ದಾನೆ.
ಅದ್ನಾನ್ ಮುಹಮ್ಮದ್ ಕೊರ್ಕುಟ್ ಎಂಬ ಯುವಕನನ್ನು ರಕ್ಷಣಾ ತಂಡಗಳು ರಕ್ಷಿಸಿದೆ.ಸುಮಾರು 94 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದ ಆತ ಬದುಕುಳಿದಿದ್ದೇ ರೋಚಕ.
ಅದ್ನಾನ್ ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಭೂಕಂಪ ಸಂಭವಿಸಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಆತ ತನ್ನ ಸ್ವಂತ ಮೂತ್ರವನ್ನು ಕುಡಿದು ಬದುಕಿರುವುದಾಗಿ ಹೇಳಿದ್ದಾನೆ.
ನಿದ್ರೆ ಬರದಂತೆ ಫೋನ್‌ನಲ್ಲಿ ಅಲಾರಾಂ ಆಗುವಂತೆ ಹೊಂದಿಸಿದ್ದ. ಆದರೆ, ಎರಡು ದಿನಗಳ ನಂತರ, ಬ್ಯಾಟರಿ ಖಾಲಿ ಆಗಿ ಫೋನ್ ಆಫ್ ಆಗಿದೆ.ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗ ಧ್ವನಿಗಳು ಕೇಳಿಸುತ್ತಿದ್ದವು,ನಾನು ಧ್ವನಿ ಮಾಡಿದ್ದೆ. ಆದರೆ ಯಾರಿಗೂ ಕೇಳಿಸಿಲ್ಲ. ಕಾರ್ಯಾಚರಣೆ ವೇಳೆ ಬದುಕುವುದು ಕಷ್ಟ ಎಂದು ಭಾವಿಸಿದ್ದೆ.ರಕ್ಷಿಸಿದ ಜನರಿಗೆ ಧನ್ಯವಾದ ಎಂದು ಅದ್ನಾನ್ ಹೇಳಿದ್ದಾರೆ.