ಬಿಹಾರ;ವ್ಯಕ್ತಿಯೋರ್ವನ ಹೊಟ್ಟೆಯಿಂದ ಬರೊಬ್ಬರಿ 4.5 ಕೆ.ಜಿ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಹೊರತೆಗೆದಿದ್ದಾರೆ.
ಬಿವಾಶ್ ಚಂದ್ರ ತಿವಾರಿ ಎಂಬವರು ಎರಡು ತಿಂಗಳಿನಿಂದ ತೀವ್ರ ಹಸಿವು, ಮಲಬದ್ಧತೆ ಮತ್ತು ಕಿಬ್ಬೊಟ್ಟೆಯ ಹಿಗ್ಗುವಿಕೆಯಿಂದ ಬಳಲುತ್ತಿದ್ದರು.ವೈದ್ಯರು ತಪಾಸಣೆ ನಡೆಸಿದಾಗ ಗೆಡ್ಡೆ ಇರುವುದು ಕಂಡು ಬಂದಿದೆ.
ಮೂತ್ರಕೊಶದ ಶಸ್ತ್ರಚಿಕಿತ್ಸೆಯನ್ನು ವೈದ್ಯರು ನಡೆಸಿದ್ದಾರೆ.
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಗೆಡ್ಡೆಗಳು ತುಂಬಾ ದೊಡ್ಡದಾಗಿದ್ದು, ಅವು ಮೂತ್ರಪಿಂಡಗಳು, ಯಕೃತ್ತು, ಗುಲ್ಮ, ಮೇದೋಜ್ಜೀರಕ ಗ್ರಂಥಿ ಮತ್ತು ಕರುಳುಗಳಿಗೆ ಸೇರಿಕೊಂಡಿರುವುದನ್ನು ಪತ್ತೆ ಹಚ್ಚಿದ್ದರು.