ಟ್ರಸ್ಟ್ ಗೆ ನೇಮಕಾತಿಯಲ್ಲಿ ಮಹಾ ಎಡವಟ್ಟು; ಸತ್ತವರನ್ನು ಟ್ರಸ್ಟ್ ಗೆ ನೇಮಿಸಿ ಸರಕಾರ ಆದೇಶ

ಬೆಂಗಳೂರು:ರಾಜ್ಯ ಸರ್ಕಾರದಿಂದ ನಿನ್ನೆ 21 ಟ್ರಸ್ಟ್, ಪ್ರತಿಷ್ಠಾನಗಳಿಗೆ ಅಧ್ಯಕ್ಷರು,ಸದಸ್ಯರನ್ನು ನೇಮಕ ಮಾಡಿ ಆದೇಶಿಸಲಾಗಿತ್ತು.




ಆದೇಶದ ಪಟ್ಟಿ ಹೊರಬೀಳುತ್ತಿದ್ದಂತೆ ಟೀಕೆಗೆ ಕಾರಣವಾಗಿದೆ. ಸರಕಾರ ಹೊರಡಿಸಿರುವಂತ ಪಟ್ಟಿಯಲ್ಲಿ ಸತ್ತವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬರುವಂತ 21 ಟ್ರಸ್ಟ್ ಹಾಗೂ ಪ್ರತಿಷ್ಠಾನಗಳಿಗೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿ ಆದೇಶಿಸಿತ್ತು.




ಹೀಗೆ ನೇಮಕ ಮಾಡಿರುವಂತ ಚಿಕ್ಕಮಗಳೂರಿನ ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನೂತನ ಸದಸ್ಯರ ಪಟ್ಟಿಯಲ್ಲಿ, ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರನ್ನು ನೇಮಕ ಮಾಡಲಾಗಿದೆ.




ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾಗಿ ಇಂದು ನೇಮಕ ಮಾಡಿರುವಂತ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿಯವರು,ಲೇಖಕ ಕೆಪಿ ಪೂರ್ಣಚಂದ್ರ ತೇಜಸ್ವಿಯವರ ಪತ್ನಿ.ಅವರು 2021ರ ಡಿಸೆಂಬರ್ ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.ಇದೀಗ ಅವರನ್ನು ಕೆಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರನ್ನಾಗಿ ನೇಮಕ ಮಾಡಿ ಸರಕಾರ ಎಡವಟ್ಟು ಮಾಡಿದೆ.







ಟಾಪ್ ನ್ಯೂಸ್