ಮತ್ತೊಂದು ತ್ರಿವಳಿ ತಲಾಖ್ ಪ್ರಕರಣ ದಾಖಲು
ಮಧ್ಯಪ್ರದೇಶ;ಗುಣದಲ್ಲಿ 29 ವರ್ಷದ ಮಹಿಳೆಯೊಬ್ಬರು ತ್ರಿವಳಿ ತಲಾಖ್ (ತ್ವರಿತ ವಿಚ್ಛೇದನ) ನೀಡಿದ ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
29 ವರ್ಷದ ಹೀನಾ ಬಾನು ನೀಡಿರುವ ದೂರಿನ ಆಧಾರದಲ್ಲಿ ರಾಜಸ್ಥಾನದ ಬಾರಾನ್ ನಿವಾಸಿ ಜಾಹೀರ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.
ರುಥಿಯಾಯಿ ಗ್ರಾಮದ ಬರ್ಖೇಡಿ ನಿವಾಸಿ ಹೀನಾ ರಘೋಗಢ ಪೊಲೀಸರಿಗೆ ರಾಜಸ್ಥಾನದ ಬರ್ರಾ ನಿವಾಸಿಯಾದ ಅವರ ಪತಿ ಜಹೀರ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ಆತನ ಮೇಲೆ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆ, 2019ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುಮಾರು ಒಂಬತ್ತು ವರ್ಷಗಳ ಹಿಂದೆ ಜಹೀರ್ ಜೊತೆ ನಿಕಾಹ್ ಮಾಡಿಕೊಂಡಿದ್ದು, ದಂಪತಿಗೆ ಎಂಟು ವರ್ಷದ ಮಗಳಿದ್ದಾಳೆ ಎಂದು ಹೀನಾ ದೂರಿನಲ್ಲಿ ತಿಳಿಸಿದ್ದಾರೆ. ಮದುವೆಯಾದ ನಂತರ ಜಹೀರ್ ಹೀನಾಗೆ ಹೊಡೆದು ಚಿತ್ರಹಿಂಸೆ ನೀಡಲಾರಂಭಿಸಿದ.
ಪತಿಯೊಂದಿಗೆ ಹೊಂದಾಣಿಕೆಯ ಕೊರತೆ ಕಾರಣ 2019ರಿಂದ ಗುನಾದಲ್ಲಿರುವ ತಮ್ಮ ಪೋಷಕರ ಮನೆಯಲ್ಲಿ ಸಂತ್ರಸ್ತೆ ವಾಸವಿದ್ದು.ಸ್ಥಳೀಯ ಕೋರ್ಟ್‌ನಲ್ಲಿ ಜೀವನ ನಿರ್ವಹಣೆಗಾಗಿ ಪತಿಯ ವಿರುದ್ಧ ಪತ್ನಿ ದಾವೆ ಹೂಡಿದ್ದಾರೆ.
ಶನಿವಾರ ಕೋರ್ಟ್ ವಿಚಾರಣೆಗಾಗಿ ಆಗಮಿಸಿದ್ದ ಜಾಹೀರ್ ಖಾನ್, ಅತ್ತೆ ಮತ್ತು ಸಂಬಂಧಿಕರ ಉಪಸ್ಥಿತಿಯಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ತ್ರಿವಳಿ ತಲಾಖ್ ಅನುಸರಿಸುವವರಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.