ಕೇರಳ;ಪ್ರೇಮಿಗಳ ದಿನದಂದೇ ತೃತೀಯ ಲಿಂಗಿ ಜೋಡಿಯ ವಿವಾಹ ನಡೆದಿರುವ ಘಟನೆ ಪಾಲಕ್ಕಾಡ್ ಜಿಲ್ಲೆಯ ಎಲವಚ್ಚೇರಿಯಲ್ಲಿ ನಡೆದಿದೆ.
ಪಾಲಕ್ಕಾಡ್ ನ ಪ್ರವೀಣ್ ನಾಥ್ ಹಾಗೂ ಮಲಪ್ಪುರಂ ಜಿಲ್ಲೆಯ ಕೊಟ್ಟೈಕಲ್‌ನ ರಿಶಾನಾ ಐಶು ಪ್ರೀತಿಸಿ ವಿವಾಹವಾದವರು.
ಇವರ ವಿವಾಹಕ್ಕೆ ಆರಂಭದಲ್ಲಿ ವಿರೋಧ ವ್ಯಕ್ತವಾಗಿತ್ತು.ಕೊನೆಗೆ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವಿವಾಹ ನಡೆದಿದೆ.
ಬಾಡಿಬಿಲ್ಡರ್ ಆಗಿರುವ ಪ್ರವೀಣ್ 2021ರಲ್ಲಿ ಮಿಸ್ಟರ್ ಕೇರಳ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ.ರಿಶಾನ ಐಶು ಮಾಡೆಲ್ ಆಗಿದ್ದು, ತ್ರಿಶ್ಯೂರ್‌ನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ಇದೀಗ ತೃತೀಯ ಲಿಂಗಿ ಜೋಡಿಯ ವಿವಾಹ ಕೇರಳದಲ್ಲಿ ಭಾರೀ ಸದ್ದು ಮಾಡಿದೆ.