BIG NEWS ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ಬಾಡಿಬಿಲ್ಡರ್ ಪ್ರವೀಣ್ ಆತ್ಮಹತ್ಯೆ;ಪ್ರೇಮಿಗಳ ದಿನದಂದು ಟ್ರಾನ್ಸ್ ಯುವತಿ ರಿಶಾನಾಗೆ ವಿವಾಹವಾಗಿದ್ದ ಪ್ರವೀಣ್ ದುರಂತ ಸಾವು

ತ್ರಿಶೂರ್:ಕೇರಳದ ಮೊದಲ ಟ್ರಾನ್ಸ್‌ಜೆಂಡರ್ ಬಾಡಿಬಿಲ್ಡರ್ ಪ್ರವೀಣ್ ನಾಥ್ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

20ರ ಹರೆಯದ ಪ್ರವೀಣ್ ನಾಥ್ ಗುರುವಾರ ಮಧ್ಯಾಹ್ನ ನಗರದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಜೀವನ ಅಂತ್ಯಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅವರ ದೇಹವನ್ನು ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ವರ್ಷದ ಪ್ರೇಮಿಗಳ ದಿನದಂದು ಪ್ರವೀಣ್ ನಾಥ್ ಅವರು ತಮ್ಮ ಟ್ರಾನ್ಸ್ ಸಂಗಾತಿ ರಿಶಾನಾಗೆ ವಿವಾಹವಾಗಿದ್ದರು.ಆದರೆ ಆ ಬಳಿಕ ಅವರ ಸಂಬಂಧವು ಹಳಸಿದೆ ಎಂದು ಕೂಡ ವರದಿಯಾಗಿತ್ತು.

2021ರ ರಾಜ್ಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಟ್ರಾನ್ಸ್‌ಜೆಂಡರ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಪ್ರವೀಣ್‌ಗೆ ಮಿಸ್ಟರ್ ಕೇರಳ ಎಂಬ ಬಿರುದು ನೀಡಲಾಯಿತು.

ರೂಪದರ್ಶಿ ಮತ್ತು ಮಿಸ್ ಮಲಬಾರ್ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿರುವ ಟ್ರಾನ್ಸ್ ಮಹಿಳೆ ರಿಶಾನಾ ಐಶು ಅವರನ್ನು ಮದುವೆಯಾದ ಮೂರು ತಿಂಗಳ ನಂತರ ಅವರ ಸಾವು ಸಂಭವಿಸಿದೆ. ದಂಪತಿಗಳು ಫೆಬ್ರವರಿ 14, 2023 ರಂದು ವಿವಾಹವಾಗಿದ್ದರು.

ಕೆಲ ದಿನಗಳ ಹಿಂದೆ ಪ್ರವೀಣ್ ರಿಶಾನಾಳಿಂದ ಬೇರ್ಪಡುವುದಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ್ದರು. ಆದಾಗ್ಯೂ, ಅವರು ಒಂದು ಗಂಟೆಯ ನಂತರ ಅದನ್ನು ಅಳಿಸಿದ್ದಾರೆ. ಮೇ 1 ರಂದು ಪ್ರಕಟವಾದ ಎರಡನೇ ಪೋಸ್ಟ್‌ನಲ್ಲಿ, ದಂಪತಿಗಳು ಬೇರ್ಪಟ್ಟಿಲ್ಲ ಎಂದು ಅವರು ಹೇಳಿದ್ದಾರೆ. ನಾವು ಒಟ್ಟಿಗೆ ವಾಸಿಸುತ್ತೇವೆ ಎಂದು ಹೇಳಿದ್ದರು.

ಕೇರಳದಲ್ಲಿ ಭಾರೀ ಸದ್ದು ಮಾಡಿದ್ದ ಈ ಜೋಡಿಯ ದಾಂಪತ್ಯ ಇದೀಗ ದುರಂತ ಅಂತ್ಯ ಕಂಡಿದೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com