ಬಿಹಾರ; ಬಿಹಾರದ ಸಮಸ್ತಿಪುರದಲ್ಲಿ ಬಳಕೆಯಾಗದ ರೈಲು ಹಳಿ ನಾಪತ್ತೆಯಾಗಿರುವ ವಿಚಿತ್ರ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಕೋಟ್ಯಂತರ ಮೌಲ್ಯದ ರೈಲ್ವೆ ಸ್ಕ್ರ್ಯಾಪ್ ಅನ್ನು ಸ್ಕ್ರ್ಯಾಪ್ ಡೀಲರ್‌ಗೆ ಮಾರಾಟ ಮಾಡಿರುವುದು ಕಂಡುಬಂದಿದೆ ಮತ್ತು ಈ ವ್ಯವಹಾರದಲ್ಲಿ ಆರ್‌ಪಿಎಫ್ ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಸ್ಕ್ರ್ಯಾಪ್ ಹಗರಣದ ವರದಿಗಳ ನಂತರ ಸರಿಯಾದ ಮಾಹಿತಿ ನೀಡದ ಕಾರಣ ಅಮಾನತುಗೊಳಿಸಲಾಗಿದೆ.
ಸಮಸ್ತಿಪುರ ರೈಲ್ವೇ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಅಗರ್ವಾಲ್ ಮಾತನಾಡಿ, ತನಿಖೆಗಾಗಿ ಇಲಾಖಾ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.ಪ್ರಕರಣದ ಬಗ್ಗೆ ಇಲಾಖೆಗೆ ಮಾಹಿತಿ ನೀಡದ ಕಾರಣಕ್ಕಾಗಿ ಇಬ್ಬರು ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ರೈಲ್ವೆ ಮಾರ್ಗದ ಸ್ಕ್ರ್ಯಾಪ್ ಅನ್ನು ಹರಾಜು ಮಾಡದೆ ಆರ್‌ಪಿಎಫ್‌ನ ಸಹಕಾರದಿಂದ ಸ್ಕ್ರ್ಯಾಪ್ ಡೀಲರ್‌ಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ.