ಬೆಂಗಳೂರು;ಟ್ರಾಫಿಕ್ ನಿಯಮ ಉಲ್ಲಂಘಿಸಿದವರು ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಪಾವತಿಸಲು ಕರ್ನಾಟಕ ಸರ್ಕಾರ 50% ರಿಯಾಯಿತಿಯೊಂದಿಗೆ ನಿಗದಿತ ಸಮಯದಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ.
ಈ ಅವಕಾಶ ಕೇವಲ 10 ದಿನವರೆಗೆ ಚಾಲ್ತಿಯಲ್ಲಿರಲಿದೆ ಎಂದು ಬೆಂಗಳೂರು ನಗರ ಸಂಚಾರ ಪೋಲಿಸ್ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆ ಪ್ರಾಧಿಕಾರ ಕಾರ್ಯಾಧ್ಯಕ್ಷರ ಮನವಿಯ ಮೇರೆಗೆ ನಡೆಯಲಿರುವ ಲೋಕ್ ಅದಾಲತ್ತನ್ನು ಗಮನದಲ್ಲಿಕೊಂಡು 10 ದಿನದವರೆಗೆ ಅವಕಾಶ ಚಾಲ್ತಿಯಲ್ಲಿರಲಿದೆ ಎಂದು ಬೆಂಗಳೂರು ನಗರ ಸಂಚಾರ ಪೋಲಿಸ್ ಆದೇಶ ಹೊರಡಿಸಿದೆ.
ರಿಯಾಯಿತಿ ದರದಲ್ಲಿ ದಂಡ ಪಾವತಿ ಮಾಡಬೇಕೆಂದರೆ ಫೆಬ್ರವರಿ 11 ರೊಳಗೆ ಮಾತ್ರ ಪಾವತಿಸಬೇಕು ನಂತರ ಯಾವುದೇ ರಿಯಾಯಿತಿ ಇರುವುದಿಲ್ಲ.
ಕರ್ನಾಟಕ ಒನ್ ವೆಬ್ ಸೈಟ್ ಮೂಲಕ ವಿವರ ಪಡೆದು ದಂಡ ಪಾವತಿಸಬಹುದು.ಜೆತೆಗೆ ಪೇಟಿಎಂ ಮೂಲಕ ಉಲ್ಲಂಘನೆ ವಿವರ ಪಡೆದು ದಂಡ ಪಾವತಿಗೆ ಅವಕಾಶ ನೋಡಲಾಗಿದೆ.ಅಲ್ಲದೇ ಹತ್ತಿರದ ಸಂಚಾರ ಪೊಲೀಸ್ ಠಾಣೆಯಲ್ಲಿ ವಾಹನ ಸಂಖ್ಯೆ ನೀಡಿ ದಂಡ ಕಟ್ಟುವ ಮೂಲಕ ರಶೀದಿ ಪಡೆದುಕೊಳ್ಳಬಹುದು.