ಬೆಂಗಳೂರು;ಟ್ರಾಫಿಕ್ ನಿಯಮ ಉಲ್ಲಘನೆಗೆ ಬಾಕಿ ಇರುವ ದಂಡ ಪಾವತಿಸಲು 10 ದಿನಗಳ ರಿಯಾಯಿತಿಯನ್ನು ಇಲಾಖೆ ನೀಡಿದ್ದು, ಜನರು ದಂಡ ಕಟ್ಟುತ್ತಿದ್ದಾರೆ. ಇದರಿಂದ ಇಲಾಖೆ ಕೋಟ್ಯಾಂತರ ರೂ.ದಂಡವನ್ನು ಸಂಗ್ರಹಿಸಿಕೊಂಡಿದೆ.
ನಿಯಮ ಉಲ್ಲಂಘಿಸಿದ ವಾಹನಗಳ ದಂಡ ಪಾವತಿಸಲು ಶೇ.50 ವಿನಾಯಿತಿ ಘೋಷಣೆ ಮಾಡಲಾಗಿತ್ತು.
ಫೆಬ್ರವರಿ 2ರಿಂದ ಇಲ್ಲಿಯವರೆಗೂ 8,68,405 ಪ್ರಕರಣಗಳಿಗೆ ಸಂಬಂಧಿಸಿದಂತೆ 25,42,52,000 ಕೋಟಿಗೂ ಅಧಿಕ ಮೊತ್ತದ ದಂಡ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ಮೊದಲ ದಿನವೇ 5,61,45,000 ರೂಪಾಯಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿತ್ತು.ಇನ್ನು ಎರಡನೇ ದಿನ ಬರೋಬ್ಬರಿ 6,80,72,500 ರೂ.ದಂಡ ಸಂಗ್ರಹವಾಗಿತ್ತು.ಮೂರನೇ ದಿನ 6 ಕೋಟಿ 31 ಲಕ್ಷ 77 ಸಾವಿರದ 750 ರೂಪಾಯಿ ಕಲೆಕ್ಷನ್ ಆಗಿದೆ.
ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1032 ಪ್ರಕರಣಗಳಲ್ಲಿ18,81,300 ರೂ. ದಂಡ ಸಂಗ್ರಹವಾಗಿದೆ.ಹೀಗೆ ಬೇರೆ-ಬೇರೆ ಠಾಣೆಗಳಲ್ಲಿ ವಾಹನ ಸವಾರರು ರಿಯಾಯಿತಿಯಲ್ಲಿ ದಂಡ ಪಾವತಿಸುತ್ತಿದ್ದಾರೆ.