ರೈತನ ಬದುಕನ್ನೇ ಬದಲಿಸಿದ ಟೊಮೆಟೋ;ಬೆಲೆಯೇರಿಕೆಯಿಂದ 4 ಕೋಟಿ ಆದಾಯ

ರೈತನ ಬದುಕನ್ನೇ ಬದಲಿಸಿದ ಟೊಮೆಟೋ;ಬೆಲೆಯೇರಿಕೆಯಿಂದ 4 ಕೋಟಿ ಆದಾಯ

ಆಂಧ್ರಪ್ರದೇಶ;ಚಿತ್ತೂರು ಜಿಲ್ಲೆಯ ರೈತನೊಬ್ಬ ತಾನು ಬೆಳೆದ 40,000 ಬಾಕ್ಸ್ ಟೊಮ್ಯಾಟೊ ಮಾರಾಟ ಮಾಡಿ 45 ದಿನಗಳ ಅವಧಿಯಲ್ಲಿ ಬರೋಬ್ಬರಿ 4 ಕೋಟಿ ರೂ. ಹಣ ಗಳಿಸಿದ್ದಾರೆ ಎಂದು ವರದಿಯಾಗಿದೆ.

ಕೃಷಿಕ ಚಂದ್ರಮೌಳಿ 22 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಇವರು ಅಪರೂಪದ ಟೊಮ್ಯಾಟೊ ಗಿಡವನ್ನು ಬಿತ್ತಿದ್ದಾರೆ. ಉತ್ತಮ ಇಳುವರಿಯನ್ನು ಅಲ್ಪಾವಧಿಯಲ್ಲಿ ಪಡೆಯಲು ಸೂಕ್ಷ್ಮ ನೀರಾವರಿ ವಿಧಾನಗಳನ್ನು ಅನುಸರಿಸಿದ್ದಾರೆ. ಜೂನ್ ಅಂತ್ಯದ ವೇಳೆಗೆ ತಾವು ನಿರೀಕ್ಷಿಸಿದಂತೆ ಲಾಭದಾಯಕ ಇಳುವರಿ ಪಡೆದಿದ್ದರಿಂದ ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದಾರೆ.

ತಾವು ಬೆಳೆದ ಬೆಳೆಯನ್ನು ಕರ್ನಾಟಕದ ಕೋಲಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ. ಕಳೆದ 45 ದಿನಗಳಲ್ಲಿ 40,000 ಬಾಕ್ಸ್‌ಗಳನ್ನು ಮಾರಾಟ ಮಾಡಿದಾಗ ಮಾರುಕಟ್ಟೆಯಲ್ಲಿ 15 ಕೆಜಿ ಕ್ರೇಟ್ ಟೊಮ್ಯಾಟೊ ಬೆಲೆ 1,000- 1,500 ರೂ. ಇತ್ತು.

ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಚಂದ್ರಮೌಳಿ, ಇಲ್ಲಿಯವರೆಗೆ ನಾನು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಕೊಟ್ಟಾಗ 4 ಕೋಟಿ ರೂ. ಆದಾಯ ಬಂದಿದೆ. ಅದರಲ್ಲಿ 1 ಕೋಟಿ ರೂ. ಕಮಿಷನ್ ಮತ್ತು ಸಾರಿಗೆ ಶುಲ್ಕಕ್ಕಾಗಿ ಕಡಿತಗೊಂಡಿದೆ. ಆದ್ದರಿಂದ ಲಾಭವು 3 ಕೋಟಿ ರೂ. ಲಭಿಸಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಟೊಮೆಟೋ ಬೆಲೆ ಏರಿಕೆ ರೈತನ ಬದುಕನ್ನೇ ಬದಲಿಸಿರುವುದು ವಿಶೇಷವಾಗಿದೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು