ಟೊಮೆಟೊ ತಿನ್ನುವುದನ್ನು ನಿಲ್ಲಿಸಿದರೆ ಟೊಮೆಟೊ ಬೆಲೆ ಕಡಿಮೆಯಾಗುತ್ತದೆ- ಸಚಿವೆಯೋರ್ವರ ಹೇಳಿಕೆ

ಟೊಮೆಟೊ ತಿನ್ನುವುದನ್ನು ನಿಲ್ಲಿಸಿದರೆ ಟೊಮೆಟೊ ಬೆಲೆ ಕಡಿಮೆಯಾಗುತ್ತದೆ ಎಂದು ಉತ್ತರ ಪ್ರದೇಶದ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಪೋಷಣೆ ರಾಜ್ಯ ಸಚಿವೆ ಪ್ರತಿಭಾ ಶುಕ್ಲಾ ಅವರು ಹೇಳಿದ್ದಾರೆ

ಉತ್ತರ ಪ್ರದೇಶ ಸರ್ಕಾರದ ಬೃಹತ್ ವೃಕ್ಷ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ‘ಟೊಮೆಟೋ ದುಬಾರಿಯಾಗಿದ್ದರೆ ಮನೆಯಲ್ಲೇ ಬೆಳೆಯಬೇಕು. ನೀವು ಟೊಮೆಟೊ ತಿನ್ನುವುದನ್ನು ನಿಲ್ಲಿಸಿದರೆ, ಅನಿವಾರ್ಯವಾಗಿ ಬೆಲೆ ಕುಸಿಯುತ್ತದೆ. ನೀವು ಟೊಮೆಟೊ ಬದಲಿಗೆ ನಿಂಬೆ ಹಣ್ಣು ತಿನ್ನಬಹುದು ಎಂದು ಹೇಳಿದ್ದಾರೆ.

ಯಾರೂ ಟೊಮ್ಯಾಟೊ ತಿನ್ನದಿದ್ದರೆ, ಬೆಲೆ ಕಡಿಮೆಯಾಗುತ್ತದೆ ಎಂದು ಹೇಳಿದರು. ಯುಪಿ ಸಚಿವೆಯ ಈ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನಾವು ಹಳ್ಳಿಯ ಮಹಿಳೆಯರು ನ್ಯೂಟ್ರಿಷನ್ ಗಾರ್ಡನ್ ಮಾಡಿದ್ದೇವೆ.ಅದರಲ್ಲಿ ಟೊಮ್ಯಾಟೊ ಕೂಡ ನೆಡಬಹುದು ಎಂದು ಸಚಿವೆ ಶುಕ್ಲಾ ಹೇಳಿದ್ದಾರೆ.

ಟೊಮೆಟೊ ಯಾವಾಗಲೂ ದುಬಾರಿಯಾಗಿದೆ. ನೀವು ಟೊಮೆಟೊ ತಿನ್ನದಿದ್ದರೆ ನಿಂಬೆಹಣ್ಣು ಬಳಸಿ, ಹೆಚ್ಚು ದುಬಾರಿಯಾದುದನ್ನು ತಿರಸ್ಕರಿಸಿ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್