ಮಹಿಳೆ ತನ್ನ ತಾಯಿಗೆ ದುಬೈನಿಂದ 10 ಕೆಜಿ ಟೊಮ್ಯಾಟೊ ಹೊತ್ತು ತಂದು ಸುದ್ದಿಯಾಗಿದ್ದಾರೆ.
ತಾಯಿಯ ಕೋರಿಕೆಯ ಮೇರೆಗೆ ಮಹಿಳೆ ದುಬೈನಿಂದ ಭಾರತಕ್ಕೆ 10 ಕೆಜಿ ಟೊಮೆಟೋವನ್ನು ಹೊತ್ತು ತಂದಿದ್ದಾರೆ ಎಂದು ಮಾಡಿರೋ ಟ್ವೀಟ್ ಎಲ್ಲೆಡೆ ವೈರಲ್ ಆಗಿದೆ.
ಟ್ವಿಟರ್ ಬಳಕೆದಾರರು ಭಾರತದಲ್ಲಿ ತಮ್ಮ ತಾಯಿಗೆ ದುಬೈ ಮೂಲದ ಸಹೋದರಿ ನೀಡಿರುವ ಕಾಸ್ಟ್ಲೀ ಉಡುಗೊರೆ ಬಗ್ಗೆ ಹೇಳಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ದೇಶದ ಕೆಲವು ಭಾಗಗಳಲ್ಲಿ ಟೊಮೆಟೋ ಕೆಜಿಗೆ 250 ರೂ. ಆಗಿದೆ.
ಭಾರತೀಯ ಆಹಾರ ಕ್ರಮದಲ್ಲಿ ಟೊಮೆಟೋ ಅತೀ ಅಗತ್ಯವಾದ ತರಕಾರಿಯಾಗಿರುವ ಕಾರಣ ಗೃಹಿಣಿಯರು ಕಂಗಾಲಾಗಿದ್ದಾರೆ.ಎಷ್ಟರಮಟ್ಟಿಗೆ ಎಂದರೆ ಜನರು ತಮ್ಮ NRI ಸಂಬಂಧಿಕರಿಗೆ ಉಡುಗೊರೆಗಳ ಬದಲಿಗೆ ಟೊಮೆಟೊಗಳನ್ನು ತೆಗೆದುಕೊಂಡು ಬರಲು ಕೇಳಿಕೊಳ್ಳುತ್ತಿದ್ದಾರೆ. ಇಂಥಾ ಒಂದು ಘಟನೆಯ ಬಗ್ಗೆ ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
ದುಬೈ ಮೂಲದ ಮಗಳು ಭಾರತದಲ್ಲಿನ ತನ್ನ ತಾಯಿಗೆ ಐಷಾರಾಮಿ ಶಾಪಿಂಗ್‌ಗೆ ಹೆಸರುವಾಸಿಯಾದ ಯುಎಇ ನಗರದಿಂದ ಏನು ತರಬೇಕು ಎಂದು ಕೇಳಿದಳು. ಈ ಸಂದರ್ಭದಲ್ಲಿ ತಾಯಿ 10 ಕಿಲೋಗ್ರಾಂಗಳಷ್ಟು ಟೊಮೆಟೊ ತರಲು ಹೇಳಿದರು.’ರೆವ್ಸ್’ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಈ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಟೊಮೆಟೋ ಕುರಿತಾಗಿರುವ ಈ ಪೋಸ್ಟ್ ಸಖತ್ ವೈರಲ್ ಆಗಿದೆ.ನೂರಾರು ಮಂದಿ ಇದನ್ನು ಲೈಕ್ ಮಾಡಿದ್ದಾರೆ.52 ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟ್‌ನ್ನು ವೀಕ್ಷಿಸಿದ್ದಾರೆ.ಟೊಮೆಟೋ ಬೆಲೆಯೇರಿಕೆಯ ಸಮಯದಲ್ಲಿ ದುಬೈನಲ್ಲಿರುವ ಮಕ್ಕಳ ಕಾರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಪೋಸ್ಟ್‌ಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.