ಟಿಪ್ಪುವಿನ ಖಡ್ಗ ಬರೊಬ್ಬರಿ 145 ಕೋಟಿಗೆ ಹರಾಜು; ಮಲ್ಯ ಬಳಿಯಿದ್ದ ಈ ಖಡ್ಗವನ್ನು ಅವರು ಹಿಂದಿರುಗಿಸಿದ್ದೇಕೆ ಗೊತ್ತಾ?

ನವದೆಹಲಿ;ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಬಳಿಯಿದ್ದ ಖಡ್ಗ ಬರೋಬ್ಬರಿ 145 ಕೋಟಿ ರೂ.ಗೆ ಮತ್ತೊಮ್ಮೆ ಹರಾಜು ಆಗಿದೆ.

ಮದ್ಯದ ದೊರೆ ವಿಜಯ್‌ ಮಲ್ಯ ಅವರು ಬ್ರಿಟೀಷರ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಟಿಪ್ಪು ಖಡ್ಗವನ್ನು 2004ರಲ್ಲಿ ಹರಾಜಿನಲ್ಲಿ ಖರೀದಿ ಮಾಡಿದ್ದರು.ವಿಜಯ್‌ ಮಲ್ಯ ಈ ಖಡ್ಗವನ್ನು ರೂ 1.5 ಕೋಟಿಗೆ ವಾಪಾಸ್ಸು ಮಾಡಿದ್ದರು.

ಮಲ್ಯ ಈ ಖಡ್ಗ ತಮ್ಮ ಕುಟುಂಬಕ್ಕೆ ದುರದೃಷ್ಟವಾಗಿದೆ ಎಂದು ಹೇಳಿಕೊಂಡು ಅದನ್ನು ಮಾರಾಟ ಮಾಡಿದ್ದರು ಎಂದು ವರದಿಯಾಗಿತ್ತು.ಖಡ್ಗ ಪಡೆದ ಬಳಿಕ ತಾನು ದಿವಾಳಿಯಾದೆ ಎನ್ನುವುದು ಮಲ್ಯ ಭಾವನೆ ಎಂದು ವರದಿಯಾಗಿತ್ತು.

ಈ ಖಡ್ಗದ ಈಗ ಖರೀದಿ ಮಾಡಿದ ಮಾಲಕರ ಬಗ್ಗೆ ಪ್ರತಿಕ್ರಿಯಿಸಲು ಇಂಗ್ಲೆಂಡ್‌ನ ಹರಾಜು ಸಂಸ್ಥೆ ಬೊನ್ಹಾಮ್ಸ್‌ ನಿರಾಕರಿಸಿದೆ.ಯಾವುದೇ ಕಾರಣಕ್ಕೆ ಮಾರಾಟಗಾರರ ಮತ್ತು ಖರೀದಿದಾರರ ಹೆಸರುಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಹೇಳಿದೆ.ಗೌಪ್ಯತೆ & ಸುರಕ್ಷತೆ ದೃಷ್ಟಿಯಿಂದ ಹರಾಜು ಪಡೆದವರ ಮಾಹಿತಿ ಬಹಿರಂಗಪಡಿಸುವುದಿಲ್ಲ ಎಂದು ಸಂಸ್ಥೆ ಹೇಳಿದೆ.

ಖಡ್ಗ ಖರೀದಿಸಿದ ಬಳಿಕ ಮದ್ಯದ ದೊರೆಯಾಗಿದ್ದ ಮಲ್ಯ ಕುಟುಂಬಕ್ಕೆ ಕೆಟ್ಟಕಾಲ ಆಂಭವಾಗಿತ್ತು ಎಂಬ ಮಾತು ಕೇಳಿಬಂದಿತ್ತು.

1799ರಲ್ಲಿನಡೆದ 4ನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್‌ ಮರಣ ಹೊಂದಿದಾಗ ಅವರ ಅರಮನೆಯಲ್ಲಿ ಪತ್ತೆಯಾಗಿದ್ದ ಖಡ್ಗವನ್ನು ಲೂಟಿ ಮಾಡಿ ಹೋಗಿದ್ದ ಬ್ರಿಟಿಷ್‌ ಸೇನೆ ಮೆಜರ್‌ ಜನರಲ್‌ ಬೇರ್ಡೆಗೆ ಅರ್ಪಿಸಿತ್ತು.ಟಿಪ್ಪು ಸುಲ್ತಾನ್ ಯುದ್ಧದಲ್ಲಿ ಮೃತಪಟ್ಟ ನಂತರ ಈ ಖಡ್ಗವನ್ನು ಅರಮನೆಯಿಂದ ವಶಪಡಿಸಿಕೊಳ್ಳಲಾಗಿತ್ತು.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com