ತುಂಬೆ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಗಾಂಜಾ ಸೇವಿಸಿ ನಶೆಯಲ್ಲಿದ್ದ ಯುವಕನ ಬಂಧನ

ಬಂಟ್ವಾಳ:ತುಂಬೆ ಸಾರ್ವಜನಿಕ ಬಸ್‌ ತಂಗುದಾಣದ ಬಳಿ ಮಾದಕ ವಸ್ತುಗಳನ್ನು ಸೇವಿ ತೂರಾಡುತ್ತಿದ್ದ ಯುವಕನಿಗೆ
ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಟ್ವಾಳ ಗ್ರಾಮಾಂತರ ಠಾಣಾ ಎಸ್ ಐ ಜಯಶ್ರೀ ಪ್ರಭಾಕರ್ ನಿನ್ನೆ ರೌಂಡ್ಸ್‌ ಕರ್ತವ್ಯದಲ್ಲಿದ್ದ ವೇಳೆ ತುಂಬೆ ಸಾರ್ವಜನಿಕ ಬಸ್‌ ತಂಗುದಾಣದ ಬಳಿ ಓರ್ವ ಮಾದಕ ಸೇವಿಸಿ ತೂರಾಡುವುತ್ತಿರುವುದು ಮಾಹಿತಿ ತಿಳಿದಿದೆ.

ಪೊಲೀಸರು ಹೋಗಿ ಆತನಿಗೆ ವಶಕ್ಕೆ ಪಡೆದುಕೊಂಡಿದ್ದಾರೆ.
ಬಳಿಕ ಆತನನ್ನು ವಿಚಾರಿಸಿದಾಗ ತುಂಬೆ ಗ್ರಾಮದ ಮದಕ ನಿವಾಸಿ ಶೋಯೆಬ್‌ ಅಕ್ತರ್‌ ಎಂದು ಹೇಳಿದ್ದಾನೆ.

ವೈದ್ಯಕೀಯ ಪರೀಕ್ಷೆ ವೇಳೆ ಯುವಕ ಗಾಂಜಾ ಸೇವಿಸಿರುವುದು ತಿಳಿದು ಬಂದಿದೆ.ಈ ಕುರಿತು ಮುಂದಿನ ಕ್ರಮವನ್ನು ಪೊಲೀಸರು ಕೈಗೊಂಡಿದ್ದಾರೆ.

ಟಾಪ್ ನ್ಯೂಸ್