ಮೋದಿ ಆಗಮನಕ್ಕೆ ಹೆಲಿಕಾಪ್ಟರ್‌ ಟ್ರಯಲ್‌ ವೇಳೆ ಅನಾಹುತ: ಡಿವೈಎಸ್ಪಿ ಆಸ್ಪತ್ರೆಗೆ ದಾಖಲು

ತುಮಕೂರು;ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ರಿಹರ್ಸಲ್ ವೇಳೆ ಅನಾಹುತ ಸಂಭವಿಸಿದೆ.

ಮೇ.5ಕ್ಕೆ ತುಮಕೂರಿಗೆ ಮೋದಿ ಆಗಮಿಸಲಿದ್ದಾರೆ. ಆದ್ದರಿಂದ ಎರಡು ದಿನಗಳ ಮುಂಚಿತವಾಗಿ ಎಸ್‌ಪಿಜಿ ತಂಡದೊಂದಿಗೆ ಹೆಲಿಕಾಪ್ಟರ್ ರಿಹಸರ್ಲ್ ನಡೆಸುತ್ತಿದ್ದರು. ಈ ವೇಳೆ ತುಮಕೂರು ನಗರ ಡಿವೈಎಸ್ ಪಿ ಶ್ರೀನಿವಾಸ್ ಕಾನ್ ವೇ ರಿಹಸರ್ಲ್ ಪರಿಶೀಲನೆ ನಡೆಸುತ್ತಿದ್ದರು.ಹೆಲಿಕಾಪ್ಟರ್ ನ ಗಾಳಿಯ ರಭಸಕ್ಕೆ ತುಮಕೂರು ವಿಶ್ವವಿದ್ಯಾಲಯದ ಗೇಟ್ ಅಲುಗಾಡಿ ಪಕ್ಕದಲ್ಲಿಯೇ ನಿಂತುಕೊಂಡಿದ್ದ ಡಿವೈಎಸ್‌ಪಿ ಶ್ರೀನಿವಾಸ್‌ ತಲೆಗೆ ಬಡಿದಿದೆ.

ಘಟಮೆಯಲ್ಲಿ ತೀವ್ರವಾಗಿ ಗಾಯಗೊಂಡು ಡಿವೈಎಸ್‌ಪಿ ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತುಮಕೂರು ಯುನಿವರ್ಸಿಟಿ ಹೆಲಿಪ್ಯಾಡ್ ಬಳಿ ಹೆಲಿಕಾಪ್ಟರ್ ಲ್ಯಾಂಡಿಂಗ್ ನಿಂದ 100 ಮೀಟರ್ ದೂರದಲ್ಲಿ ಡಿವೈಎಸ್ ಪಿ ಶ್ರೀನಿವಾಸ್ ನಿಂತಿದ್ದರು. ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ವೇಳೆ‌ ಬಿಸಿದ ಗಾಳಿ ರಭಸಕ್ಕೆ ಯುನಿವರ್ಸಿಟಿ ಗೇಟ್ ಅಲುಗಾಡಿ ಪಕ್ಕದಲ್ಲಿಯೇ ಇದ್ದ ಶ್ರೀನಿವಾಸ್‌ ತಲೆಗೆ ಬಡಿದಿದೆ. ಇದರಿಂದ ಗಾಯಗೊಂಡಿದ್ದ ಶ್ರೀನಿವಾಸ್ ಅವರನ್ನ ಕೂಡಲೇ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಡಿವೈಎಸ್ಪಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅವರಿಗೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com