ಒಂದೇ ಮನೆಯಲ್ಲಿ ಮೂವರು ಸಹೋದರಿಯರು ಆತ್ಮಹತ್ಯೆ; ದುಡಿಕಿನ ನಿರ್ಧಾರಕ್ಕೆ ಅನಾಥ ಭಾವನೆ ಕಾರಣ?

ತುಮಕೂರು;ಒಂದೇ ಮನೆಯಲ್ಲಿ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾಹಕ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯಲ್ಲಿ ನಡೆದಿದೆ‌.

ರಂಜಿತಾ (24), ಬಿಂದು(21), ಚಂದನಾ (18) ಮೃತ ಸಹೋದರಿಯರು.

ರಂಜಿತಾ, ಬಿಂದು ಮತ್ತು ಚಂದನಾ ಅವರು ಚಿಕ್ಕ ವಯಸ್ಸಲ್ಲೇ ತಂದೆ-ತಾಯಿಯನ್ನ ಕಳೆದುಕೊಂಡರು. 10 ವರ್ಷದ ಹಿಂದೆಯೇ ತಂದೆ-ತಾಯಿ ನಿಧನರಾದ ಹಿನ್ನೆಲೆ ಮೂವರು ಮಕ್ಕಳನ್ನೂ ಅಜ್ಜಿ ಸಾಕುತ್ತಿದ್ದರು. ರಂಜಿತಾ ಮತ್ತು ಬಿಂದು ಇಬ್ಬರೂ ಕೆ.ಬಿ.ಕ್ರಾಸ್​ನ ಗಾರ್ಮೆಂಟ್ಸ್​ವೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಚಂದನಾ ವಿದ್ಯಾಭ್ಯಾಸ ಮಾಡುತ್ತಿದ್ದಳು.

ಇವರಿಗೆ ಆಸರೆಯಾಗಿದ್ದ ಅಜ್ಜಿ 3 ತಿಂಗಳ ಹಿಂದೆ ಕೊನೆಯುಸಿರೆಳೆದಿದ್ದರು.ಮೊದಲೇ ಅಪ್ಪ-ಅಮ್ಮನನ್ನು ಕಳೆದುಕೊಂಡು ಕಂಗೆಟ್ಟಿದ್ದ ಈ ಮಕ್ಕಳಿಗೆ ಅಜ್ಜಿಯ ಸಾವು ಭಾರೀ ಆಘಾತ ನೀಡಿತ್ತು.

ಅನಾಥ ಭಾವನೆ ಕಾಡುತ್ತಿದ್ದ ನೋವಲ್ಲೇ ಮೂವರು ಬಾಲದೇವರಹಟ್ಟಿಯಿಂದ ಬರಕನಹಾಲ್​ ತಾಂಡಾಕ್ಕೆ ಹೋಗುವ ದಾರಿಯ ರಸ್ತೆ ಬದಿಯಲ್ಲಿರುವ ಒಂಟಿ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಟಾಪ್ ನ್ಯೂಸ್