ವಿಡಿಯೋ ಮೂಲಕ‌ ಕ್ಷಮೆ ಕೇಳಿದ ಮುಜಾಫರ್ ನಗರದ ಶಾಲಾ ಶಿಕ್ಷಕಿ

ಹೊಸದಿಲ್ಲಿ: ಮುಜಾಫರ್ ನಗರ ಶಾಲೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಕಿ ತೃಪ್ತಿ ತ್ಯಾಗಿ ವಿಡಿಯೋ ಮೂಲಕ ಕೈಮುಗಿದು ಕ್ಷಮೆ ಕೇಳಿದ್ದು, ಈ ವಿಚಾರದಲ್ಲಿ ಯಾವುದೇ ಕೋಮು ಭಾವನೆ ಕೆರಳಿಸುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಜಾಫರ್‌ ನಗರದ ನೇಹಾ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲೆ ಆಗಿರುವ ಶಿಕ್ಷಕಿ ತಮ್ಮ ವೀಡಿಯೋ ಸಂದೇಶದಲ್ಲಿ “ನಾನು ತಪ್ಪು ಮಾಡಿದ್ದೇನೆ.ಆದರೆ ಹಿಂದು ಮುಸ್ಲಿಂ ಭಾವನೆ ನನ್ನಲ್ಲಿರಲಿಲ್ಲ. ಮಕ್ಕಳು ಹೋಂ ವರ್ಕ್‌ ಮಾಡಿರಲಿಲ್ಲ. ಅವರಿಗೆ ಸರಿಯಾಗಿ ಪಾಠಗಳನ್ನು ನೆನಪಿನಲ್ಲಿಟ್ಟುಕೊಳ್ಳಲಿ ಎನ್ನುವುದಷ್ಟೇ ನನ್ನ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.

ನಾನು ಅಂಗವಿಕಲೆಯಾಗಿದ್ದು, ಎದ್ದು ನಿಲ್ಲಲು ನನಗೆ ಆಗುವುದಿಲ್ಲ. ಹಾಗಾಗಿ ಉಳಿದ ವಿದ್ಯಾರ್ಥಿಗಳಲ್ಲಿ ಆತನಿಗೆ ಕಪಾಳಕ್ಕೆ ಬಾರಿಸಲು ಹೇಳಿದೆ. ಆತ ಶೈಕ್ಷಣಿಕ ಮುಂದೆ ಬರಲಿ ಎನ್ನುವುದು ನನ್ನ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.

ಇದನ್ನು ಹಿಂದೂ ಮುಸ್ಲಿಂ ಸಮಸ್ಯೆ ಎಂದು ಬಿಂಬಿಸಲು ಬಳಕೆ ಮಾಡಲಾಗುತ್ತಿದೆ. ನನ್ನ ಮನಸ್ಸಿನಲ್ಲಿ ವಿದ್ಯಾರ್ಥಿಗಳನ್ನು ಹಿಂದೂ ಮುಸ್ಲಿಂ ಎಂದು ಒಡೆಯುವ ಚಿಂತನೆಯಿಲ್ಲ. ಬಹಳಷ್ಟು ಮುಸ್ಲಿಂ ಪೋಷಕರು ಫೀಸ್ ಕಟ್ಟಲು ಹಣ ಇಲ್ಲದಿದ್ದಾಗ ಉಚಿತವಾಗಿ ಶಿಕ್ಷಣ ನೀಡಿದ್ದೇನೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್