ತ್ರಿಶೂರ್:ಚಲಿಸುತ್ತಿದ್ದ ಪೊಲೀಸ್ ಜೀಪಿನಿಂದ ಜಿಗಿದು ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ.
ಮೃತರನ್ನು ತಿರುವನಂತಪುರಂ ವಲಿಯತುರಾ ಮೂಲದ ಸಾನು ಸೋನಿ (30) ಎಂದು ಗುರುತಿಸಲಾಗಿದೆ. ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅವರು ತೀವ್ರ ಗಾಯಗೊಂಡಿದ್ದರು.ಬುಧವಾರ ರಾತ್ರಿ ಅವರನ್ನು ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು.
ವರದಿಗಳ ಪ್ರಕಾರ ಮದ್ಯದ ಅಮಲಿನಲ್ಲಿದ್ದ ಸಾನು ಸೋನಿ ಬುಧವಾರ ರಾತ್ರಿ ಪಟ್ಟಣದಲ್ಲಿ ಗಲಾಟೆ ಮಾಡಿ ಜನರಿಗೆ ಚಾಕುವಿನಿಂದ ಬೆದರಿಸಿದ್ದ.ತ್ರಿಶೂರ್ ಪೂರ್ವ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಪೊಲೀಸರು ಆತನನ್ನು ವಿಯ್ಯೂರು ಜೈಲಿಗೆ ಕರೆದೊಯ್ಯುತ್ತಿದ್ದಾಗ ಚಲಿಸುತ್ತಿದ್ದ ಪೊಲೀಸ್ ಜೀಪಿನಿಂದ ಜಿಗಿದಿದ್ದಾನೆ. ಇಲ್ಲಿನ ಅಶ್ವಿನಿ ಆಸ್ಪತ್ರೆ ಜಂಕ್ಷನ್ ಬಳಿ ಈ ಘಟನೆ ನಡೆದಿದೆ.
ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸುವಾಗ ಆತನ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಪೊಲೀಸರು ಆತನನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು.ಆದರೆ ಇಂದು ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.